ಹೇರ್ ಕಲರಿಂಗ್ ಫ್ಯಾಶನ್ ಲೋಕದ ಲೇಟೆಸ್ಟ್ ಟ್ರೆಂಡ್ ಗಳಲ್ಲಿ ಒಂದು. ಬಿಳಿ ಕೂದಲನ್ನು ಮರೆಮಾಚಲು ಬಳಕೆ ಬಂದ ಈ ಸ್ಟೈಲ್ ಅನ್ನು ಇಂದು ಯುವ ಜನತೆ ಬಹುವಾಗಿ ಮೆಚ್ಚಿಕೊಂಡಿದೆ.
ಕೂದಲಿಗೆ ಒಮ್ಮೆ ಬಣ್ಣ ಹಚ್ಚಿದರೆ ಮತ್ತೆ ಮತ್ತೆ ಹಚ್ಚಿಕೊಂಡೇ ಇರಬೇಕು ಎಂಬುದು ಸುಳ್ಳು. ನಿಮಗೆ ಬೇಕಾದಾಗ ಬೇಕಿರುವ ಬಣ್ಣ ಹಚ್ಚಿಕೊಳ್ಳಬಹುದು. ಇದರಿಂದ ಕೂದಲಿಗೆ ಹಾನಿ ಆಗುವುದಿಲ್ಲ.
ಕೂದಲಿಗೆ ಬಣ್ಣ ಮಾಡುವುದರಿಂದ ಅದರ ಮೂಲ ಬಣ್ಣ ನಾಶವಾಗುವುದಿಲ್ಲ. ಯಾವಾಗಾದರೊಮ್ಮೆ ಬೇಕಿರುವ ಬಣ್ಣ ಬಳಸಿ ವಿಭಿನ್ನವಾಗಿ ಕಾಣಿಸಿಕೊಂಡು ಬಳಿಕ ಮತ್ತೆ ನಿಮ್ಮ ಕೂದಲಿನ ಸಹಜ ಬಣ್ಣವನ್ನೇ ಪಡೆಯಬಹುದು.
ಟೇಸ್ಟಿ ಟೇಸ್ಟಿ ತೆಂಗಿನಕಾಯಿ ಸಿಹಿ ವಡೆ
ಬಣ್ಣದಲ್ಲಿ ಸಾಕಷ್ಟು ಪ್ರಮಾಣದ ಕೆಮಿಕಲ್ ಗಳಿದ್ದು ಪದೇ ಪದೇ ಅದನ್ನು ಹಚ್ಚುವುದರಿಂದ ಸಮಸ್ಯೆಗಳಾಗಬಹುದು. ಯಾವಾಗಲಾದರೊಮ್ಮೆ ಹಚ್ಚಿಕೊಂಡರೆ ಕೂದಲು ಉದುರುವ, ಬಹುಬೇಗ ಬೆಳ್ಳಗಾಗುವ ಸಮಸ್ಯೆ ಕಾಡದು.
ಯಾವುದೇ ಬಣ್ಣ ಮೂರರಿಂದ ನಾಲ್ಕು ಬಾರಿ ಕೂದಲು ತೊಳೆದುಕೊಂಡ ಬಳಿಕ ನಿಲ್ಲುವುದಿಲ್ಲ. ಹಾಗಾಗಿ ಉತ್ತಮ ದರ್ಜೆಯ ಹೇರ್ ಕಲರ್ ಬಳಕೆ ಮಾಡಿ ಕೂದಲಿನ ಕಾಳಜಿ ಮಾಡಿಕೊಳ್ಳಿ.