ಈಗ ಮ್ಯಾಚಿಂಗ್ ಬ್ಯಾಗ್, ಚಪ್ಪಲಿ, ಬಳೆ ಕೊಳ್ಳುವ ಜೊತೆಗೆ ಮ್ಯಾಚಿಂಗ್ ಮಾಸ್ಕ್ ಹೊಂದಿಸುವ ಕಾಲ. ಹಾಗಾಗಿ ಅದು ಕೇವಲ ಮ್ಯಾಚಿಂಗ್ ಗೆ ಮಾತ್ರ ಸೀಮಿತವಾಗದೆ ಫ್ಯಾಶನ್ ಆಗಿಯೂ ಬದಲಾಗುತ್ತಿದೆ.
ಸರ್ಜಿಕಲ್ ಮಾಸ್ಕ್ ಗಳು ಒಂದೇ ರೀತಿ ಇರುತ್ತದೆ. ಆದರೆ ಅವುಗಳಿಂದ ಆರೋಗ್ಯದ ರಕ್ಷಣೆ ಸಾಧ್ಯವಿಲ್ಲ. ಬಟ್ಟೆಯ ಮಾಸ್ಕ್ ಗಳು ಆರೋಗ್ಯದೊಂದಿಗೆ ನಿಮಗೆ ವಿಭಿನ್ನ ಲುಕ್ ನೀಡಲೂ ನೆರವಾಗುತ್ತವೆ. ನಿಮಗೆ ಬೇಕಿರುವ ವಿನ್ಯಾಸದ ಆಕಾರದ ಮಾಸ್ಕ್ ಗಳನ್ನು ಈಗ ನೀವೇ ತಯಾರಿಸಿಕೊಳ್ಳಬಹುದು. ಹೇಗೆಂದಿರಾ…?
ಪ್ಲೇನ್ ಬಣ್ಣದ ಮೃದುವಾದ ಹತ್ತಿಯ ಬಟ್ಟೆ ಖರೀದಿಸಿ. ನಿಮಗೆ ಬೇಕಾದ ಬಣ್ಣದ ಇತರ ಉಡುಪುಗಳ ಕೊಲಾಜ್ ಮಾಡಿ. ಮ್ಯಾಚಿಂಗ್ ಬೇಕಿದ್ದರೆ ಅದನ್ನೇ ಜೋಡಿಸಿ.
ಸಾಧ್ಯವಾದಷ್ಟು ಲೇಯರ್ ಹೆಚ್ಚಿಸಿ. ಎರಡರಿಂದ ಮೂರು ಲೇಯರ್ ಗೆ ಆದ್ಯತೆ ನೀಡಿ. ಎಲ್ಯಾಸ್ಟಿಕ್ ಬಳಕೆಯಿಂದ ಕಿವಿ ಹಿಂದೆ ನೋಯುತ್ತಿದ್ದರೆ ಬಟ್ಟೆಯಿಂದಲೇ ಕಟ್ಟುವಂತೆ ಹೊಲಿಯಿರಿ.
ಹೊಸ ಫ್ಯಾಶನ್ ಪ್ರಕಾರ ನಿಮ್ಮ ಸೀರೆ ಅಥವಾ ಉಡುಪಿಗೆ ಹೊಂದಿಕೊಳ್ಳುವಂತೆ ಮಾಸ್ಕ್ ಮೇಲೆಯೂ ಎಂಬ್ರಾಯಿಡರಿ ಹಾಕಿ. ವಿಶೇಷ ಸಂದರ್ಭಗಳಲ್ಲಿ ಧರಿಸುವ ಉಡುಪಿಗೆ ಇದು ಹೆಚ್ಚು ಸೂಕ್ತವಾಗುತ್ತದೆ.