ಮುಖದ ಮೇಲೆ ಒಮ್ಮೆ ಮೊಡವೆ ಮೂಡಿತೆಂದರೆ ಬೇಡವೆಂದರೂ ನಮ್ಮ ಕೈ ಅದರ ಮೇಲೆಯೇ ಓಡಾಡುತ್ತಿರುತ್ತದೆ, ಅದನ್ನು ಹಿಸುಕಿ ತ್ವಚೆಯ ಮೇಲೆ ಕಲೆ ಉಳಿಯುವಂತೆ ಮಾಡಿ ಬಿಡುತ್ತದೆ. ಈ ಕಲೆಗಳನ್ನು ಹೋಗಲಾಡಿಸಲು ಹೀಗೆ ಮಾಡಿ.
ಮೊಡವೆಗಳನ್ನು ಚಿವುಟುವುದು, ಕೀವು ಹೊರತೆಗೆಯುವುದು ಮಾಡಬೇಡಿ. ಅಲೋವೆರಾ ಜೆಲ್ ಗೆ ವಿಟಮಿನ್ ಇ ಮಾತ್ರೆಗಳನ್ನು ಬೆರೆಸಿ. ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿಕೊಳ್ಳಿ. ಹದಿನೈದು ದಿನದೊಳಗೆ ನಿಮ್ಮ ಮುಖದ ಮೊಡವೆಗಳ ಸಮಸ್ಯೆ ದೂರವಾಗುತ್ತದೆ.
ಡ್ರೈ ಶಾಂಪುವಿಗೆ ಸಂಬಂಧಿಸಿದ ಈ ವಿಚಾರಗಳು ನಿಜವಲ್ಲ
ಟಿ ಟ್ರೀ ಎಣ್ಣೆಯಿಂದಲೂ ಮೊಡವೆ ಕಲೆಗಳನ್ನು ದೂರ ಮಾಡಬಹುದು. ಬೇರೆ ಎಣ್ಣೆಗಳಿಗೆ ಹೋಲಿಸಿದರೆ ಇದರಿಂದ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ. ಹಾಗಾಗಿ ಒಣ ತ್ವಚೆ ಇರುವವರು ಇದನ್ನು ಯಾವುದೇ ಭೀತಿಯಿಲ್ಲದೆ ಹಚ್ಚಿಕೊಳ್ಳಬಹುದು.
ಇದರೊಂದಿಗೆ ತೆಂಗಿನೆಣ್ಣೆಯನ್ನೂ ಬಳಸಿ. ರಾತ್ರಿ ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ಮರುದಿನ ಬೆಳಗೆದ್ದು ಮುಖ ತೊಳೆಯುವುದರಿಂದ ಕಲೆಗಳೂ ದೂರವಾಗುತ್ತವೆ. ಕ್ರಮೇಣ ಮುಖ ಹೊಳಪನ್ನೂ ಪಡೆದುಕೊಳ್ಳುತ್ತದೆ.