ಮೂಗಿನ ಆಕಾರ ಸರಿಯಾಗಿದ್ದರೆ ಮುಖದ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತದೆ. ಹಾಗಾಗಿ ಮೂಗು ಸ್ಲಿಮ್ ಮಾಡಲು ವಿಭಿನ್ನ ವ್ಯಾಯಾಮಗಳಿವೆ. ಅವುಗಳನ್ನು ನೀವು ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು.
*ಕೆಲವರ ಮೂಗು ಮೇಲಿನಿಂದ ದಪ್ಪವಾಗಿದ್ದರೆ ಕೆಳಭಾಗದಲ್ಲಿ ತೆಳುವಾಗಿರುತ್ತದೆ. ಅದಕ್ಕೆ ಉತ್ತಮ ಆಕಾರವನ್ನು ನೀಡಲು ಈ ವ್ಯಾಯಾಮಗಳನ್ನು ಮಾಡಿ. ಮೂಗಿನ ಮೇಲೆ ಬೆರಳನ್ನು ಒತ್ತಿ ಮತ್ತು ಮೇಲಿನಿಂದ ಕೆಳಕ್ಕೆ ಎಳೆಯಿರಿ. ಆ ವೇಳೆ ಬೆರಳು ಚಲಿಸುವಾಗ ನೀವು ಆಳವಾದ ಉಸಿರನ್ನು ತೆಗೆದುಕೊಳ್ಳಬೇಕಾಗುತ್ತದೆ. ಬೆರಳು ಕೆಳಗಡೆ ಬರುತ್ತಿದ್ದಂತೆ ಉಸಿರನ್ನು ಬಿಡಿ.
ನಿಮ್ಮ ತ್ವಚೆ ರಕ್ಷಿಸುವ ಗಡ್ಡ….!
*ಮೂಗಿನ ತುದಿಯನ್ನು ಆಕಾರಗೊಳಿಸಲು ಅಥವಾ ತೀಕ್ಷ್ಣಗೊಳಿಸಲು ನೀವು ಈ ವ್ಯಾಯಾಮವನ್ನು ಮಾಡಬೇಕು. ಈ ವ್ಯಾಯಾಮ ಮಾಡಲು ನಿಮ್ಮ ಮೂಗಿನ ಮೇಲೆ ಸ್ವಲ್ಪ ಕೆನೆ ಅಥವಾ ಎಣ್ಣೆಯನ್ನು ಹಚ್ಚಿ. ಮೂಗನ್ನು ಮಸಾಜ್ ಮಾಡಿ. ನಿಮ್ಮ ನೇರ ಕೈಯ ತೋರು ಬೆರಳನ್ನು ಎರಡೂ ಹುಬ್ಬುಗಳ ಮಧ್ಯದಲ್ಲಿ ಇಡುತ್ತೀರಿ. ಇದರ ನಂತರ ಬೆರಳುಗಳನ್ನು ಮಧ್ಯದ ಬಿಂದುವಿನಿಂದ ಮೂಗಿನ ತುದಿಗೆ ತಂದುಕೊಳ್ಳುತ್ತಾ ಮಸಾಜ್ ಮಾಡಿ.