ಹಣೆಯಲ್ಲಿ ನೆರಿಗೆ ಮೂಡುತ್ತಿದೆಯೇ. ಇದಕ್ಕೆ ಮುಖ್ಯ ಕಾರಣಗಳೆಂದರೆ ಒತ್ತಡ ಅಥವಾ ಆತಂಕ ಹಾಗೂ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯದಿರುವುದು. ಮಳಿಗೆಗಳಲ್ಲಿ ಸಿಗುವ ಕ್ರೀಮ್ ಹಚ್ಚುವ ಬದಲು ನೀವು ಮನೆಯಲ್ಲೇ ಈ ಪ್ರಯೋಗಗಳನ್ನು ಮಾಡಿ ನೋಡಬಹುದು.
ಓಟ್ ಮೀಲ್ಸ್ ಪೌಡರ್ ಗೆ ಒಂದು ಚಮಚ ಕಿತ್ತಳೆ ರಸ, ಬಾದಾಮಿ ಪೌಡರ್, ಗೋಧಿ ಎಣ್ಣೆ ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಹಣೆಯ ಭಾಗಕ್ಕೆ ಹಚ್ಚಿ. 30 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ದಿನಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡಿದರೆ ಬಹುಬೇಗ ಫಲಿತಾಂಶ ದೊರೆಯುತ್ತದೆ.
ತುಳಸಿ ಫೇಸ್ ಪ್ಯಾಕ್ ಟ್ರೈ ಮಾಡಿದ್ದೀರಾ…?
ಬಾಳೆಹಣ್ಣು ಮತ್ತು ಮುಲ್ತಾನಿ ಮಿಟ್ಟಿಯ ಮಿಶ್ರಣಕ್ಕೆ ಎರಡು ಹನಿ ಹಾಲು ಹಾಗೂ ಜೇನುತುಪ್ಪ ಬೆರೆಸಿ ಹಣೆಗೆ ಹಚ್ಚಿ. ಹದಿನೈದು ನಿಮಿಷ ಬಳಿಕ ತೊಳೆದುಕೊಂಡರೆ ಸುಕ್ಕು ಬಹುಬೇಗ ಕಡಿಮೆಯಾಗುತ್ತದೆ.
ಎಣ್ಣೆಯಿಂದ ಹಣೆಯ ಭಾಗವನ್ನು ಮಸಾಜ್ ಮಾಡುವುದರಿಂದಲೂ ಸುಕ್ಕಿನ ಪ್ರಮಾಣ ಕಡಿಮೆ ಆಗುತ್ತದೆ. ಮಲಗುವ ಮುಂಚೆ ಅರ್ಧ ಚಮಚ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಹಣೆ ಭಾಗಕ್ಕೆ ಮಸಾಜ್ ಮಾಡಿ. ಇದರಿಂದ ಮುಖದಲ್ಲಿರುವ ಸುಕ್ಕು ನೆರಿಗೆಗಳು ದೂರವಾಗುತ್ತವೆ.