ದೇಹದ ಬೇರೆ ಚರ್ಮಗಳಿಗೆ ಹೋಲಿಸಿದರೆ ಮುಖದ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಬಿಸಿಲಿನಲ್ಲಿ ಸುತ್ತಾಡಿ ಬಂದಾಗ ಮುಖ ಉರಿಯಲು ಶುರುವಾಗುತ್ತದೆ.
ಕೆಲವೊಮ್ಮೆ ಮುಖದ ಚರ್ಮ ಕೆಂಪಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಫೇಸ್ಟ ಪ್ಯಾಕ್ ಹಚ್ಚಿ.
ಕಲ್ಲಂಗಡಿಹಣ್ಣಿನ ರಸ, ಸೌತೆಕಾಯಿ ರಸ, ಕಿತ್ತಳೆ ಸಿಪ್ಪೆಯ ಪುಡಿ, ಮೊಸರು ಎಲ್ಲವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್ ಮಾಡಿ ಮುಖ, ಕತ್ತಿಗೆ ಹಚ್ಚಿಕೊಳ್ಳಿ. 2-3 ನಿಮಿಷಗಳ ಕಾಲ ಮಸಾಜ್ ಮಾಡಿ, 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದರಿಂದ ಮುಖದ ಉರಿ ಕಡಿಮೆಯಾಗಿ ಚರ್ಮ ತಂಪೆನಿಸುತ್ತದೆ.