ಹಣ್ಣುಗಳ ರಾಜ ಎಂದೇ ಪರಿಗಣಿಸಲ್ಪಟ್ಟಿರುವ ಮಾವಿನ ಹಣ್ಣಿನ ಪ್ರಯೋಜನಗಳು ಒಂದೆರಡಲ್ಲ. ಇದರ ಮಾಸ್ಕ್ ಹಾಕಿಕೊಳ್ಳುವ ಮೂಲಕ ಹೊಳೆಯುವ ಮುಖವನ್ನು ನೀವು ಹೊಂದಬಹುದು.
ಚೆನ್ನಾಗಿ ಹಣ್ಣಾಗಿರುವ ಮಾವಿನ ಹಣ್ಣನ್ನು ತಗೆದುಕೊಳ್ಳಿ. ನಾರು ಇಲ್ಲವಾದ್ದನ್ನೆ ಆಯ್ದುಕೊಳ್ಳಿ. 1 ಚಮಚ ಮೊಸರು 3 ಚಮಚ ಮುಲ್ತಾನಿ ಮಿಟ್ಟಿಯೊಂದಿಗೆ ಮಾವಿನ ತಿರುಳನ್ನು ತೆಗೆದು ರುಬ್ಬಿ.
ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದು ಈ ಮಿಶ್ರಣವನ್ನು ಹಚ್ಚಿ , 20 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ಸೋಪು ಉಪಯೋಗಿಸದಿರಿ. ಇದಕ್ಕೆ ಜೇನುತುಪ್ಪ, ಬೆಣ್ಣೆ ಹಣ್ಣು ಬೆರೆಸಿಯೂ ಮಿಶ್ರಣ ತಯಾರಿಸಬಹುದು.
ಒಂದು ಚಮಚ ಹಸಿ ಹಾಲಿನೊಂದಿಗೆ ಮಾವಿನ ತಿರುಳನ್ನು ಸಂಗ್ರಹಿಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಚೆನ್ನಾಗಿ ರುಬ್ಬಿ. ಓಟ್ಸ್ ರವೆಯನ್ನು ಕುಟ್ಟಿ ನುಣ್ಣಗಿನ ಪುಡಿ ಮಾಡಿ ಬಾದಾಮಿಗಳನ್ನು ಕಲ್ಲಿನ ಮೇಲೆ ಅರೆದು ಲೇಪವಾಗಿಸಿ ಮಾಡಿ ಹಚ್ಚಿಕೊಳ್ಳಿ. ನಿಮ್ಮ ತ್ವಚೆ ಕಾಂತಿಯುತವಾಗುವುದು ನಿಸ್ಸಂಶಯ.