ಮಳೆಗಾಲ ಬಂತೆಂದರೆ ಒಂದು ರೀತಿಯಲ್ಲಿ ಖುಷಿ. ಇನ್ನೊಂದು ರೀತಿಯಲ್ಲಿ ಆರೋಗ್ಯ ಹಾಗೂ ತ್ವಚೆಯ ಬಗ್ಗೆ ಕೊಂಚ ಭಯ ಇದ್ದೇ ಇರುತ್ತದೆ. ಸೀಜನ್ ಗೆ ತಕ್ಕಂತೆ ನಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳುವುದು ಮಹತ್ವದ್ದಾಗಿರುತ್ತದೆ.
ಮಳೆಗಾಲದಲ್ಲಿ ವಾತಾವರಣದಲ್ಲಿ ಹೆಚ್ಚು ತೇವಾಂಶವಿರುವುದರಿಂದ ಚರ್ಮದಲ್ಲಿ ತುರಿಕೆ, ಅಲರ್ಜಿ, ಒಡಕು, ಗುಳ್ಳೆ ಇಂತಹ ಸಮಸ್ಯೆಗಳು ಉಂಟಾಗುತ್ತವೆ. ಈ ರೀತಿಯ ಸಮಸ್ಯೆಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಕೆಲ ಉಪಯುಕ್ತ ಸಲಹೆಗಳು ಇಲ್ಲಿವೆ.
* ತ್ವಚೆ ಒಣಗಿದಂತೆ ಅಥವಾ ತುರಿಕೆಯಂತಹ ಸಮಸ್ಯೆ ಕಂಡು ಬಂದರೆ ಕೊಬ್ಬರಿ ಎಣ್ಣೆಯನ್ನು ಮೈಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡುವುದು.
* ಬಿಸಿ ನೀರಿಗೆ ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಿ ಸ್ನಾನ ಮಾಡುವುದು, ಇದರಿಂದ ಚರ್ಮದಲ್ಲಿನ ಡ್ರೈನೆಸ್ ಹೋಗುತ್ತದೆ.
* ಸ್ನಾನದ ಬಳಿಕ ಮಾಯಿಶ್ಚರೈಸರ್ ಬಳಕೆ ಮಾಡಿ.
* ಮುಖದಲ್ಲಿ ತುರಿಕೆಯಂತಹ ಸಮಸ್ಯೆ ಇದ್ದರೆ ಒಂದು ಚಮಚ ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಗೆ ಸ್ವಲ್ಪ ಸಕ್ಕರೆ ಬೆರೆಸಿ ಹಚ್ಚಿ ಎರಡು ನಿಮಿಷ ಸ್ಕ್ರಬ್ ಮಾಡಿ
* ಸ್ನಾನದ ನೀರಿನಲ್ಲಿ ಗುಲಾಬಿ ಎಸಳುಗಳನ್ನು ಹಾಕಿಟ್ಟು ಕೆಲ ಸಮಯದ ಬಳಿಕ ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಮಳೆಗಾಲದಲ್ಲಿ ತ್ವಚೆ ಕಾಂತಿಯುತವಾಗಿರುತ್ತದೆ.
* ಆಯಿಲಿ ಸ್ಕಿನ್ ಅಥವಾ ಎಣ್ನೆಯುಕ್ತ ಚರ್ಮವಾಗಿದ್ದರೆ ಬೇವಿನ ಎಲೆಯನ್ನು ಕುದಿಸಿ ಬಳಿಕ ಆ ನೀರನ್ನು ಸೋಸಿ ತಣ್ಣಗಾದ ಬಳಿಕ ಆ ನೀರಿನಲ್ಲಿ ಮುಖ ತೊಳೆದುಕೊಳ್ಳಿ.
* ಚೆನ್ನಾಗಿ ನೀರು, ಜ್ಯೂಸ್ ನ್ನು ಕುಡಿಯುವುದು ಕೂಡ ತ್ವಚೆ ರಕ್ಷಣೆಗೆ ಉಪಯೋಗಕಾರಿ
* ಮುಖದಲ್ಲಿ ಮೊಡವೆ, ಗುಳ್ಳೆಗಳಂತಹ ಸಮಸ್ಯೆಯಿದ್ದರೆ ಆಯಿಂಟ್ ಮೆಂಟ್ ಬದಲಾಗಿ ಅರಿಷಿಣ ಹಚ್ಚುವುದು ಉತ್ತಮ