alex Certify ಬಾಣಂತಿ ತೂಕ ಇಳಿಸುವುದು ಈಗ ಬಲು ಸುಲಭ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಣಂತಿ ತೂಕ ಇಳಿಸುವುದು ಈಗ ಬಲು ಸುಲಭ….!

ಗರ್ಭಿಣಿ ಸಮಯದಲ್ಲಿ ಹಾಗೂ ಹೆರಿಗೆಯ ಬಳಿಕದ ಆರೈಕೆಯಿಂದ ಮಹಿಳೆ ದೇಹ ತೂಕ ಹೆಚ್ಚಿಸಿಕೊಳ್ಳುವುದು ಸಹಜ. ಹೆರಿಗೆಯ ಬಳಿಕ ಹಲವು ರಾತ್ರಿ ನಿದ್ದೆಗೆಡುವುದರಿಂದಲೂ ದೇಹ ತೂಕ ಹೆಚ್ಚುವುದುಂಟು. ಕೆಲವೊಮ್ಮೆ ಮಾನಸಿಕ ಖಿನ್ನತೆ ಮತ್ತು ಆರೋಗ್ಯದ ಸಮಸ್ಯೆಗಳಿಗೂ ಕಾರಣವಾದೀತು.

ಹೆರಿಗೆಯ ಬಳಿಕ ಹೆಚ್ಚಿದ ತೂಕದ ಇಳಿಕೆಗಾಗಿ ಮೂರು ತಿಂಗಳ ಬಳಿಕವೇ ವ್ಯಾಯಾಮ ಯೋಗಗಳನ್ನು ನಡೆಸಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಮಗುವಿಗೆ ಹಾಲುಣಿಸುವ ಅವಧಿಯಲ್ಲಿ ಹೆಚ್ಚು ಡಯಟ್ ಮಾಡುವುದು ಎದೆಹಾಲು ಕಡಿಮೆಯಾಗಲು ಕಾರಣವಾದೀತು.

ಕಡಿಮೆ ಆಹಾರವನ್ನು ಪದೇ ಪದೇ ಸೇವಿಸುವುದು ಈ ಸಮಯದಲ್ಲಿ ಮಾಡಬಹುದಾದ ಅತ್ಯುತ್ತಮ ಡಯಟ್. ಒಂದೇ ಸಲ ಹೊಟ್ಟೆ ಬಿರಿಯುವಂತೆ ತಿನ್ನುವುದರಿಂದ ರಕ್ತದಲ್ಲಿ ಕಾರ್ಬನ್ ಅಂಶ ಹೆಚ್ಚಿ ದೇಹದಲ್ಲಿ ಕೊಬ್ಬು ಸಂಗ್ರಹವಾದೀತು. ಇದಕ್ಕೆ ಬದಲು ಕಡಿಮೆ ಪ್ರಮಾಣದಲ್ಲಿ ಎರಡು ಗಂಟೆಗೊಮ್ಮೆ ತಿನ್ನುತ್ತಿರಿ.
ಪ್ರೊಟೀನ್ ಭರಿತ ಪದಾರ್ಥಗಳನ್ನು ಸೇವಿಸಿ. ಸಾಕಷ್ಟು ನೀರು ಕುಡಿಯಿರಿ. ದೇಹದಲ್ಲಿ ಬೇಡವಾದ ಪದಾರ್ಥಗಳನ್ನು ಹೊರಹಾಕಲು ಇದರಿಂದ ಮಾತ್ರ ಸಾಧ್ಯ. ಅನಗತ್ಯ ಕೊಬ್ಬು ಕೂಡಾ ದೇಹದಿಂದ ಹೊರಹೋಗುತ್ತದೆ.

ನಾರು ಪದಾರ್ಥಗಳನ್ನು ಹೆಚ್ಚು ಸೇವಿಸಿ. ದವಸ ಧಾನ್ಯ, ಹಣ್ಣು, ತರಕಾರಿ ತಿನ್ನಿ. ಯಾವುದೇ ಕಾರಣಕ್ಕೆ ಬೆಳಗಿನ ಉಪಹಾರ ಬಿಡದಿರಿ. ಜಂಕ್ ಫುಡ್, ಎಣ್ಣೆ ತಿಂಡಿಗಳಿಂದ ದೂರವಿರಿ. ಇವುಗಳ ಸೇವನೆ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...