ಜಗತ್ತಿನ ಶ್ರೀಮಂತ ಮನೆತನದ ಸೊಸೆಯಾಗಿರುವ ನೀತಾ ಅಂಬಾನಿ ಸುಂದರಿಯೂ ಹೌದು. ಇತ್ತೀಚೆಗೆ ಅವರು ತಮ್ಮ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ನಿತ್ಯ ನಾನು ಕುಡಿಯುವ ಜ್ಯೂಸ್ ನಿಂದ ನನ್ನ ಸೌಂದರ್ಯ ಹೆಚ್ಚಿದೆ ಎಂದಿದ್ದಾರೆ ಈಕೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ವಸ್ತುಗಳನ್ನು ಬೆರೆಸಿದ ಉತ್ಪನ್ನಗಳನ್ನು ಕೊಳ್ಳುವ ಬದಲು ಮನೆಯಲ್ಲೇ ಹೀಗೆ ಮಾಡಿ ಎನ್ನುತ್ತಾರವರು.
ನೀತಾ ನಿತ್ಯ ಮನೆಯಲ್ಲಿ ಬೀಟ್ ರೂಟ್ ಜ್ಯೂಸ್ ತಯಾರಿಸಿ ಕುಡಿಯುತ್ತಾರಂತೆ. ಅದು ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುತ್ತದೆ. ಇದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ನೆಲ್ಲಿಕಾಯಿ ಸೇರಿಸುತ್ತಾರಂತೆ. ಇದರಲ್ಲಿರುವ ವಿಟಮಿನ್ ಸಿಯೂ ದೇಹಕ್ಕೆ ಅತ್ಯಗತ್ಯ.
ಇದು ಕಲೆ, ಒಣಚರ್ಮವನ್ನು ನಿವಾರಿಸಿ ದೇಹ ಡಿಹೈಡ್ರೇಟ್ ಆಗುವುದನ್ನು ತಡೆಯುತ್ತದೆ. ವ್ಯಾಯಾಮದ ಬಳಿಕ ಬೀಟ್ ರೂಟ್ ಜ್ಯೂಸ್ ಕುಡಿಯುವುದು ಬಹಳ ಒಳ್ಳೆಯದು. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಅಸಿಡಿಟಿ ಯನ್ನು ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆಯಂತೆ.