ದಪ್ಪವಾದ ಹೊಳೆಯುವ ಕೂದಲು ಮಹಿಳೆಯರ ಅಂದವನ್ನು ಇಮ್ಮಡಿಗೊಳಿಸುತ್ತದೆ. ಆದರೆ ಧೂಳು, ಸೂರ್ಯನ ಬಿಸಿಲಿಗೆ ಕೆಲವರ ಕೂದಲು ಹೊಳಪನ್ನು ಕಳೆದುಕೊಂಡಿರುತ್ತದೆ. ಅಂತವರು ದಪ್ಪವಾದ ಹೊಳೆಯುವ ಕೂದಲನ್ನು ಪಡೆಯಲು ಈ ಪದಾರ್ಥಗಳನ್ನು ಕೂದಲಿಗೆ ಹಚ್ಚಿ.
2 ಚಮಚ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ, 1 ಚಮಚ ಜೇನುತುಪ್ಪ ಇವುಗಳನ್ನು ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ ತಲೆಯನ್ನು ಕವರ್ ಮಾಡಿ. 30 ನಿಮಿಷ ಬಿಟ್ಟು ವಾಶ್ ಮಾಡಿ. ಇದರಿಂದ ಕೂದಲು ದಪ್ಪವಾಗುತ್ತದೆ ಮತ್ತು ಹೊಳೆಯುವ ಕೂದಲನ್ನು ಹೊಂದಬಹುದು.
½ ಕಪ್ ತೆಂಗಿನ ಹಾಲು, 3 ಚಮಚ ಆಲಿವ್ ಎಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ಕೂದಲು ವಾಶ್ ಮಾಡಿ.