ಕೆಲವು ಫುಡ್ ಕಾಂಬಿನೇಷನ್ ಗಳು ನಿಮ್ಮ ದೇಹ ತೂಕ ಇಳಿಸಲು ನೆರವಾಗುತ್ತವೆ. ಅವುಗಳು ಯಾವುವು ಎಂಬುದನ್ನು ತಿಳಿಯೋಣ.
ಮೊಟ್ಟೆ ಸೇವಿಸುವುದರಿಂದ ದಿನವಿಡೀ ನಿಮ್ಮ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರೊಂದಿಗೆ ಪಾಲಕ್ ಸೊಪ್ಪು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಲಭ್ಯವಾಗುತ್ತವೆ. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶವಿದ್ದರೆ ಮೊಟ್ಟೆಯಲ್ಲಿ ಪ್ರೊಟೀನ್ ಹೇರಳವಾಗಿದೆ.
ಪೀನಟ್ ಬಟರ್ ಗೆ ಹಸಿವನ್ನು ನಿಯಂತ್ರಿಸುವ ಗುಣವಿದೆ. ಹಾಗೂ ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರೊಂದಿಗೆ ಸೇಬು ಸವಿಯುವುದರಿಂದ ತೂಕ ಇಳಿಸುವುದು ಮತ್ತಷ್ಟು ಸುಲಭವಾಗುತ್ತದೆ.
ಮನೆಯಲ್ಲೇ ಇದ್ದು ತೂಕ ಹೆಚ್ಚಿದೆಯೇ….?
ಹಸಿರು ತರಕಾರಿಗಳಲ್ಲಿ ಫೈಬರ್ ಸಾಕಷ್ಟಿದ್ದು, ಕಡಿಮೆ ಕ್ಯಾಲೊರಿ ಅಂಶವಿದೆ. ಇದರ ಸಲಾಡ್ ಗೆ ಆಲಿವ್ ಆಯಿಲ್ ಬೆರೆಸಿ ಸೇವಿಸಿದರೆ ಸುದೀರ್ಘ ಕಾಲ ಹೊಟ್ಟೆ ತುಂಬಿದ ಅನುಭವ ದೊರೆಯುತ್ತದೆ.
ಓಟ್ಸ್ ಮತ್ತು ಹಣ್ಣುಗಳು, ಬಿಸಿ ನೀರಿನೊಂದಿಗೆ ನಿಂಬೆರಸ, ಗ್ರೀನ್ ಟೀ ಕೂಡಾ ಇದೇ ಪ್ರಭಾವವನ್ನು ಬೀರುತ್ತವೆ. ಹಾಗಿದ್ದರೆ ತಡ ಏಕೆ, ತೂಕ ಇಳಿಸಿಕೊಳ್ಳಲು ಇಂದೇ ಇವುಗಳನ್ನು ಟ್ರೈ ಮಾಡಿ.