ಚಳಿಗಾಲದಲ್ಲಿ ನಿಮ್ಮ ತ್ವಚೆಯ ಆರೈಕೆ ಮಾಡಲು ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ.
ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಹೆಚ್ಚು ಕೆಮಿಕಲ್ ಬಳಸಿದ ಉತ್ಪನ್ನಗಳನ್ನು ಆಯ್ದುಕೊಳ್ಳಬೇಡಿ. ಇವು ನಿಮ್ಮ ತ್ವಚೆಯ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವ ಸಾಧ್ಯತೆಯೇ ಹೆಚ್ಚು.
ಚಳಿಗಾಲದಲ್ಲಿ ಹೆಚ್ಚು ಬಾರಿ ಮುಖ ತೊಳೆಯುವುದು ಒಳ್ಳೆಯದಲ್ಲ. ಇದು ತ್ವಚೆಯ ಜೀವಕೋಶಗಳಿಗೆ ಹಾನಿ ಮಾಡಬಹುದು. ಆಲ್ಕೋಹಾಲ್ ಗಳಿಲ್ಲದ ಉತ್ಪನ್ನಗಳಿಗೆ ಆದ್ಯತೆ ನೀಡಿ. ಸಾಧ್ಯವಾದಷ್ಟು ಮನೆಮದ್ದುಗಳನ್ನು ಪ್ರಯತ್ನಿಸಿ.
ಒರಟಾದ ಕೈಗಳನ್ನು ಮೃದುಗೊಳಿಸಲು ಬಳಸಿ ಈ ʼಹ್ಯಾಂಡ್ ಮಾಸ್ಕ್ʼ
ಚಳಿಗಾಲದಲ್ಲಿ ಡ್ರೈ ಗಾಳಿ ಬೀಸುವುದರಿಂದ ತ್ವಚೆ ಒಣಗುವುದು ಹೆಚ್ಚು. ಹಾಗಾಗಿ ಮೇಕಪ್ ಮಾಡಿಕೊಳ್ಳುವ ಮುನ್ನ ಒಂದು ಹನಿ ಎಣ್ಣೆಯನ್ನು ನಿಮ್ಮ ತ್ವಚೆಯ ಮೇಲೆ ಹಚ್ಚಿಕೊಳ್ಳಿ. ಇದು ನಿಮ್ಮ ಮುಖ ಡ್ರೈ ಆಗುವುದನ್ನು ತಪ್ಪಿಸುತ್ತದೆ.
ಚಳಿಗಾಲದಲ್ಲಿ ಬಿಸಿಲಿಗೆ ಹೆಚ್ಚು ಮೈಯೊಡ್ಡಬೇಡಿ. ವಿಪರೀತ ಚಳಿ ಇದ್ದಾಗ ಸೂರ್ಯನ ಬಿಸಿಲು ಮನಸ್ಸಿಗೆ ಹಾಗೂ ದೇಹಕ್ಕೆ ಮುದ ನೀಡುತ್ತದೆ ಎಂಬುದೇನೋ ನಿಜ, ಆದರೆ ಅದರಿಂದ ದುಷ್ಪರಿಣಾಮಗಳಾಗುವುದೇ ಹೆಚ್ಚು. ಬೆಳಗಿನ ಹಾಗೂ ಸಂಜೆಯ ಬಿಸಿಲಿಗೆ ಹತ್ತು ನಿಮಿಷ ಮೈಯೊಡ್ಡಿದರೆ ಸಾಕು. ಅದಕ್ಕಿಂತ ಹೆಚ್ಚು ಒಳ್ಳೆಯದಲ್ಲ.