ಚಳಿಗಾಲದಲ್ಲಿ ಶುಷ್ಕ ಗಾಳಿ ಇರುತ್ತದೆ. ಇದು ಚರ್ಮದ ಮೇಲಿನ ಪದರದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಚರ್ಮ ಡ್ರೈ ಆಗುತ್ತದೆ. ಒಣ ಚರ್ಮದವರು ಚಳಿಗಾಲದಲ್ಲಿ ಹೆಚ್ಚು ಚರ್ಮದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಒಣ ಚರ್ಮ ಹೊಂದಿರುವವರು ಚಳಿಗಾಲದಲ್ಲಿ ಹೆಚ್ಚು ಕಾಳಜಿ ವಹಿಸಬೇಕು.
*ಚರ್ಮವನ್ನು ಪ್ರತಿದಿನ ಸ್ವಚ್ಚಗೊಳಿಸುವುದು ತುಂಬಾ ಮುಖ್ಯ. ಆದರೆ ಒಣ ಚರ್ಮದವರು ಆಗಾಗ ಸ್ವಚ್ಚ ಮಾಡವುದರಿಂದ ಒಣ ತ್ವಚೆ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ದಿನಕ್ಕೆ 2 ಬಾರಿ ಸ್ವಚ್ಚಗೊಳಿಸಿ. ಹಾಗೇ ಹೆಚ್ಚು ರಾಸಾಯನಿಕಗಳನ್ನು ಬಳಸಬೇಡಿ.
*ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಚರ್ಮದ ತೇವಾಂಶ ನಿವಾರಣೆಯಾಗಿ ಚರ್ಮ ಮತ್ತಷ್ಟು ಡ್ರೈ ಆಗುತ್ತದೆ.
*ಲೋಷನ್ ಅಥವಾ ಮಾಯಿಶ್ಚರೈಸರ್ ನ್ನು ನಿಯಮಿತವಾಗಿ ಬಳಸುವುದು ಬಹಳ ಮುಖ್ಯ. ಹಾಗೇ ಮುಖವನ್ನು ನೀರಿನಿಂದ ತೊಳೆದ ಬಳಿಕ ಟವೆಲ್ ನಿಂದ ಒರೆಸಿಕೊಳ್ಳದೇ ನೀರು ಹಾಗೇ ಒಣಗಲು ಬಿಡಿ. ಇದು ತೇವಾಂಶವನ್ನು ಲಾಕ್ ಮಾಡಲು ಸಹಕಾರಿ.
*ಪ್ರತಿದಿನ ಸಾಕಷ್ಟು ನೀರನ್ನು ಕುಡಿಯಿರಿ. ಇದರಿಂದ ಚರ್ಮಕ್ಕೆ ಅಗತ್ಯವಾದ ಪೋಷಕಾಂಶ ಸಿಗುತ್ತದೆ. ಹಾಗೇ ಟೊಮೆಟೊ, ಸೌತೆಕಾಯಿ, ಕಿತ್ತಳೆ, ಅನಾನಸ್ ಮುಂತಾದ ನೀರಿನಾಂಶ ಹೆಚ್ಚಾಗಿರುವ ಹಣ್ಣುಗಳನ್ನು ತರಕಾರಿಗಳನ್ನು ಸೆವಿಸಿ.