ಚಳಿಗಾಲದಲ್ಲಿ ಶುಷ್ಕ ಗಾಳಿಯಿಂದ ಚರ್ಮ ಒಣಗುತ್ತದೆ. ಇದರಿಂದ ಚರ್ಮದ ಮೇಲೆ ತುರಿಕೆ ಶುರುವಾಗಿ ಗುಳ್ಳೆಗಳು ಮೂಡುತ್ತದೆ.
ಈ ಗುಳ್ಳೆಗಳನ್ನು ನಿವಾರಿಸಲು ಮನೆಯಲ್ಲಿಯೇ ಸಿಗುವಂತಹ ಈ ಪದಾರ್ಥಗಳನ್ನು ಬಳಸಿ.
*ಅರಿಶಿನ : ಇದು ಉರಿಯೂತದ ಗುಣಗಳನ್ನು ಹೊಂದಿದ್ದು, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ಅರಶಿನ ಪುಡಿಯನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಚರ್ಮದ ಮೇಲೆ ಹಚ್ಚಿ.
ಗರ್ಭಿಣಿಯಾದಾಗ ಕಾಡುವ ತುರಿಕೆ ಸಮಸ್ಯೆಗೆ ಇಲ್ಲಿದೆ ಪರಿಹಾರ
*ಜೇನುತುಪ್ಪ : ಇದು ಚರ್ಮಕ್ಕೆ ಹಾನಿಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಹಾಗಾಗಿ ಜೇನುತುಪ್ಪವನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ.
*ನಿಂಬೆ ರಸ : ಇದರಲ್ಲಿರುವ ವಿಟಮಿನ್ ಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಇದು ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ತುರಿಕೆಯನ್ನು ಕಡಿಮೆ ಮಾಡುತ್ತವೆ. ನಿಂಬೆ ರಸಕ್ಕೆ ಜೇನುತುಪ್ಪ ಅಥವಾ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ.