ಕೆಲವು ಮಹಿಳೆಯರು ಗರ್ಭಾವಸ್ಥೆಯಲ್ಲಿ ಅತಿಯಾದ ಮೊಡವೆಯ ಸಮಸ್ಯೆಯಿಂದ ಬಳಲುತ್ತಾರೆ. ಇದು ಹಾರ್ಮೋನುಗಳ ವ್ಯತ್ಯಯದಿಂದ ಆಗುತ್ತದೆ.
ಅದು ಅಲ್ಲದೇ, ಗರ್ಭಾಧಾರಣೆ ಸಮಯದಲ್ಲಿ ಮುಖದ ತ್ವಚೆ ಹೆಚ್ಚು ಸೂಕ್ಷ್ಮವಾಗಿರುತ್ತದೆ.
ಹಾಗಾಗಿ ನಿಮ್ಮ ತ್ವಚೆಗೆ ಯಾವುದು ಸರಿ ಹೊಂದುತ್ತದೆಯೋ ಅದನ್ನು ಮಾತ್ರ ನಿಮ್ಮ ತ್ವಚೆಗೆ ಬಳಸಿ ಮುಖದ ಮೊಡವೆ ಸಮಸ್ಯೆ ಕಡಿಮೆಮಾಡಿಕೊಳ್ಳಿ. ಇಲ್ಲೊಂದಿಷ್ಟು ಟಿಪ್ಸ್ ಇದೆ ಒಮ್ಮೆ ಓದಿ.
* 1 ಟೇಬಲ್ ಚಮಚ ಆ್ಯಪಲ್ ಸೈಡರ್ ವಿನೇಗರ್ ಗೆ 3 ಚಮಚ ಕುದಿಸಿ ಆರಿಸಿದ ನೀರನ್ನು ಹಾಕಿ. ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿ. ಒಂದು ಹತ್ತಿಯ ಉಂಡೆಯನ್ನು ತೆಗೆದುಕೊಂಡು ಈ ನೀರಿನಲ್ಲಿ ಅದ್ದಿ ಮುಖಕ್ಕೆ ಹಚ್ಚಿಕೊಳ್ಳಿ. ನಿಮ್ಮ ತ್ವಚೆಯಲ್ಲಿರುವ ಜಿಡ್ಡಿನಂಶವನ್ನು ಇದು ಕಡಿಮೆ ಮಾಡುತ್ತದೆ. ಇದರಿಂದ ತ್ವಚೆ ಜಾಸ್ತಿ ಡ್ರೈ ಆದರೆ ಮಾಡುವುದನ್ನು ನಿಲ್ಲಿಸಿಬಿಡಿ.
*ಒಂದು ಟೇಬಲ್ ಚಮಚ ಬೇಕಿಂಗ್ ಸೋಡಾಕ್ಕೆ 1 ಟೇಬಲ್ ಚಮಚ ನೀರನ್ನು ಸೇರಿಸಿ ಮಿಕ್ಸ್ ಮಾಡಿ. ನಿಮ್ಮ ಮುಖದಲ್ಲಿ ಎಲ್ಲೆಲ್ಲಿ ಮೊಡವೆ ಇದೆಯೋ ಅಲ್ಲಿ ಇದನ್ನು ಹಾಕಿ. ಇಡೀ ಮುಖಕ್ಕೆ ಹಚ್ಚಿಕೊಳ್ಳಬೇಡಿ. ಇದು ಒಣಗಿದ ನಂತರ ತೊಳೆಯಿರಿ.
* ಇನ್ನು ನಿಂಬೆ ಹಣ್ಣು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಲಿಂಬೆಹಣ್ಣಿನ ರಸವನ್ನು ನೇರವಾಗಿ ಮುಖದಲ್ಲಿರುವ ಮೊಡವೆ ಹಾಗೂ ಕಲೆಗಳ ಮೇಲೆ ಹಚ್ಚಿ 10 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಮೊಡವೆ ಕಡಿಮೆಯಾಗುತ್ತದೆ.
* ಜೇನುತುಪ್ಪದಲ್ಲಿ ಆ್ಯಂಟಿ ಬ್ಯಾಕ್ಟಿರಿಯಲ್ ಹಾಗೂ ಆ್ಯಂಟಿಸೆಪ್ಟಿಕ್ ಪ್ರಾಪರ್ಟಿಸ್ ಇರುತ್ತದೆ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿವುದರಿಂದ ಮೊಡವೆ ಹಾಗೂ ಕಲೆಗಳು ಕಡಿಮೆಯಾಗುತ್ತದೆ.