ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಕೂದಲು ಬ್ಲೀಚ್ ಮಾಡುವ ಪ್ರವೃತ್ತಿ ಇದೆ. ಅದಕ್ಕಾಗಿ ಅವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುತ್ತಾರೆ. ಇದರಿಂದ ಕೂದಲು ಹಾಳಾಗುತ್ತದೆ. ಅದಕ್ಕಾಗಿ ಮನೆಯಲ್ಲಿಯೇ ಬ್ಲೀಚ್ ತಯಾರಿಸಿ ಕೂದಲಿಗೆ ಬಳಸಿ. ಇದರಿಂದ ಕೂದಲು ಆರೋಗ್ಯವಾಗಿರುತ್ತದೆ.
*1/2 ಕಪ್ ಬಿಸಿ ನೀರಿಗೆ 1 ಕಪ್ ನಿಂಬೆ ರಸ, ಮತ್ತು ½ ಕಪ್ ಕಂಡೀಷನರ್ ನ್ನು ಬೆರೆಸಿ ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ಕೂದಲಿಗೆ ಹಚ್ಚಿ ಸೂರ್ಯನ ಬಿಸಿಲಿನಲ್ಲಿ 1 ಗಂಟೆ ಕುಳಿತುಕೊಳ್ಳಿ. ಇದನ್ನು ತಿಂಗಳಿಗೆ ನಾಲ್ಕು ಬಾರಿ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.
*1/2 ಕಪ್ ವಿನೆಗರ್, ½ ಕಪ್ ನೀರು, 2 ಚಮಚ ಜೇನುತುಪ್ಪವನ್ನು ಮಿಕ್ಸ್ ಮಾಡಿ ಸ್ಟ್ರೇ ಬಾಟಲಿನಲ್ಲಿ ಹಾಕಿ ಕೂದಲಿಗೆ ಹಚ್ಚಿ 1 ಗಂಟೆ ಬಿಟ್ಟು ನೀರಿನಿಂದ ವಾಶ್ ಮಾಡಿ. ಬಳಿಕ ಕೂದಲಿಗೆ ಜೇನುತುಪ್ಪ ಹಚ್ಚಿ 30 ನಿಮಿಷ ಬಿಟ್ಟು ಮತ್ತೆ ವಾಶ್ ಮಾಡಿ. ಇದರಿಂದ ಕೂಡ ಉತ್ತಮ ಫಲಿತಾಂಶ ಪಡೆಯಬಹುದು.