ಕೂದಲು ಆಕರ್ಷಕವಾಗಿ ಕಾಣಲು ಕೂದಲಿಗೆ ಕಲರಿಂಗ್ ಮಾಡುತ್ತೇವೆ. ಆದರೆ ಕೆಲವರು ಕೂದಲಿಗೆ ಕಲರಿಂಗ್ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ ಹಲವು ಸಮಸ್ಯೆಗಳು ಕಾಡುತ್ತವೆ ಎಂದು ಹೇಳುತ್ತಾರೆ. ಆದರೆ ಇದೆಲ್ಲಾ ನಿಜವಲ್ಲ ಎನ್ನಲಾಗಿದೆ. ಕೂದಲಿಗೆ ಕಲರಿಂಗ್ ಮಾಡುವುದರ ಬಗ್ಗೆ ಇರುವ ತಪ್ಪು ಕಲ್ಪನೆಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.
*ಕೂದಲಿಗೆ ಕಲರಿಂಗ್ ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡುತ್ತಾ ಇರಬೇಕು ಇಲ್ಲವಾದರೆ ಕೂದಲಿಗೆ ಹಾನಿಯಾಗುತ್ತದೆ ಎನ್ನುತ್ತಾರೆ. ಆದರೆ ಇದು ಸುಳ್ಳು.
*ಕೂದಲಿಗೆ ಬಣ್ಣ ಹಚ್ಚುವುದರಿಂದ ಕೂದಲು ಬೇಗ ಬೆಳ್ಳಗಾಗುತ್ತದೆ ಎಂದು ಹೇಳುತ್ತಾರೆ. ಆದರೆ ಕೂದಲು ಬೆಳ್ಳಗಾಗುವುದು ದೇಹದಲ್ಲಿ ಮೆಲನಿನ್ ಉತ್ಪಾದನೆ ಕಡಿಮೆಯಾದಾಗ ಎನ್ನಲಾಗಿದೆ.
ಡ್ಯಾಮೇಜಾದ ಕೂದಲಿನಿಂದ ಚಿಂತೆಗೊಳಗಾಗಿದ್ರಾ…?
*ಕೂದಲು ಕಲರಿಂಗ್ ಮಾಡಿದರೆ ಅದಕ್ಕೆ ಯಾವಾಗಲೂ ಆರೈಕೆ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಸಾಮಾನ್ಯವಾಗಿ ನೀವು ಕೂದಲಿಗೆ ಪ್ರತಿದಿನ ಮಾಡುವ ಆರೈಕೆಯೇ ಸಾಕು. ಅತಿಯಾಗಿ ಮಾಡಬೇಕಾಗಿಲ್ಲ.
*ಕೂದಲಿಗೆ ಕಲರಿಂಗ್ ಮಾಡುವುದರಿಂದ ಕೂದಲು ತೆಳ್ಳಗಾಗುತ್ತದೆ ಎಂದು ಹೇಳುತ್ತಾರೆ. ಆದರೆ ಕೂದಲು ತೆಳ್ಳಗಾಗಲು ಕಾರಣ ದೇಹದಲ್ಲಿ ವಿಟಮಿನ್, ಖನಿಜಗಳ ಕೊರತೆ.