ಕೊತ್ತಂಬರಿ ಸೊಪ್ಪು ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಉತ್ತಮ. ಹಾಗೇ ಇದರಿಂದ ನಿಮ್ಮ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇದು ಮೊಡವೆಗಳನ್ನು, ಬ್ಲ್ಯಾಕ್ ಹೆಡ್ಸ್, ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಇದನ್ನು ಬಳಸುವುದು ಹೇಗೆಂದು ನೋಡೋಣ.
1ಕಪ್ ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ½ ಕಪ್ ಅಕ್ಕಿಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ ಆ ಮಿಶ್ರಣಕ್ಕೆ 1 ಚಮಚ ರೋಸ್ ವಾಟರ್ ಸೇರಿಸಿ ಪ್ಯಾಕ್ ತಯಾರಿಸಿ.
ಚಳಿಗಾಲದ ಒಣ ಚರ್ಮ ಸಮಸ್ಯೆಯೇ…? ಟ್ರೈ ಮಾಡಿ ‘ಅರಿಶಿನ ಫೇಸ್ ಪ್ಯಾಕ್’
ಬಳಿಕ ಮುಖವನ್ನು ಕ್ಲೆನ್ಸರ್ ಬಳಸಿ ಸ್ವಚ್ಚ ಮಾಡಿ ಈ ಫೇಸ್ ಪ್ಯಾಕ್ ನ್ನು ಮುಖ, ಮತ್ತು ಕುತ್ತಿಗೆಗೆ ಹಚ್ಚಿ 20 ನಿಮಿಷದ ಬಳಿಕ ಸ್ವಲ್ಪ ನೀರನ್ನು ತೆಗೆದುಕೊಂಡು ಮುಖಕ್ಕೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಬಳಸಿ.