ಮಾಸ್ಕ್ ಬಂದ ಬಳಿಕ ಫ್ಯಾಶನ್ ಲೋಕದಲ್ಲೂ ಹಲವು ಬದಲಾವಣೆಗಳಾಗಿವೆ. ಲಾಕ್ ಡೌನ್ ಮುಗಿದ ಬಳಿಕ ಜನ ನಿಧಾನಕ್ಕೆ ಮನೆಯಿಂದ ಹೊರಬರುತ್ತಿದ್ದಾರೆ. ಆದರೆ ಮಾಸ್ಕ್ ಕಡ್ಡಾಯವಾಗಿದೆ, ಪರಿಣಾಮ ಲಿಪ್ ಸ್ಟಿಕ್ ಬೇಡಿಕೆ ಭಾರೀ ಇಳಿದಿದೆ.
ಅದಕ್ಕೆ ಬದಲಾಗಿ ಇಂದಿನ ಯುವಜನತೆ ಕಣ್ಣಿನ ಮೇಕಪ್ ಗೆ ಹೆಚ್ಚಿನ ಮಹತ್ವ ಕೊಡಲು ಅರಂಭಿಸಿದ್ದಾರೆ. ಮಾಸ್ಕ್ ಕೂಡಾ ತೊಡುವ ಉಡುಪಿಗೆ ಹೊಂದಿಕೊಳ್ಳುವ ಆಕ್ಸೆಸರಿಯಾಗಿ ಬದಲಾಗಿದೆ.
ಕನಿಷ್ಠ ಇನ್ನೊಂದು ವರ್ಷದವರೆಗೆ ಮಾಸ್ಕ್ ಬಳಕೆ ಕಡ್ಡಾಯವಾಗುವ ನಿಟ್ಟಿನಲ್ಲಿ ಕಾಸ್ಮೆಟಿಕ್ ಕಂಪೆನಿಗಳು ಐಲೈನರ್, ಮಸ್ಕರಾ, ಐ ಶಾಡೋಗಳ ಬಗ್ಗೆ ಹೆಚ್ಚು ಜಾಹೀರಾತು ಪ್ರಕಟಿಸುತ್ತಿವೆ. ಅದರಂತೆ ಅವುಗಳಿಗೆ ಬೇಡಿಕೆಯೂ ಹೆಚ್ಚಿದೆ.
ಮಾಸ್ಕ್ ತೊಟ್ಟ ಬಳಿಕ ಎಲ್ಲವನ್ನೂ ಕಣ್ಣಿನಲ್ಲೇ ಹೇಳಬೇಕಾದ ಅನಿವಾರ್ಯತೆಯಿಂದಾಗಿ ಎಲ್ಲರೂ ಕಣ್ಣಿನ ಅಂದ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ. ಲಿಪ್ ಸ್ಟಿಕ್ ಬಳಕೆ ಕಡಿಮೆಯಾದರೂ ಲಿಪ್ ಕೇರ್ ಗಳಿಗೆ ಬೇಡಿಕೆ ಇಳಿದಿಲ್ಲವಂತೆ. ಅರೋಗ್ಯದ ದೃಷ್ಟಿಯಿಂದ ತುಟಿಗಳನ್ನು ಮಾಯಿಶ್ಚರ್ ಮಾಡುವ ಲಿಪ್ ಕೇರ್ ಗಳನ್ನೇ ಹೆಚ್ಚಿನ ಮಹಿಳೆಯರು ಬಳಸುತ್ತಿದ್ದಾರೆ. ಜೊತೆಗೆ ಫೇಸ್ ಕ್ರೀಮ್, ಫೇಸ್ ವಾಶ್ ಹಾಗೂ ಶಾಂಪೂಗಳ ಬಳಕೆಯಲ್ಲೂ ಗಮನಾರ್ಹವಾಗಿ ಏರಿಕೆಯಾಗಿದೆ. ಬಹುತೇಕರಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆ ದೊರೆತಿರುವುದು ಇದಕ್ಕೊಂದು ಕಾರಣವಿರಬಹುದು ಎನ್ನಲಾಗಿದೆ.