ನಿಮ್ಮ ಮುಖದ ತ್ವಚೆ ವಿಪರೀತ ಎಣ್ಣೆಯಿಂದ ಕೂಡಿದೆಯೇ. ಯಾವುದೇ ತೆರನಾದ ಮೇಕಪ್ ಮಾಡಿಕೊಂಡರೂ ಅದು ಹೆಚ್ಚು ಹೊತ್ತು ಮುಖದ ಮೇಲೆ ನಿಲ್ಲುತ್ತಿಲ್ಲವೆಂಬ ಬೇಸರವೇ. ಹಾಗಿದ್ದರೆ ಇಲ್ಲಿ ಕೇಳಿ.
ಬೆಳಿಗ್ಗೆ ಎದ್ದಾಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಫೇಸ್ ವಾಶ್ ಬಳಸಿ ಮುಖ ತೊಳೆಯಿರಿ. ಇದರಿಂದ ತ್ವಚೆಯ ಸಣ್ಣ ಸಣ್ಣ ರಂಧ್ರಗಳು ಸ್ವಚ್ಛವಾಗಿ ನಿಮ್ಮ ತ್ವಚೆ ಕಾಂತಿ ಪಡೆದುಕೊಳ್ಳುತ್ತದೆ.
ಫೇಸ್ ಆಯಿಲ್ ಮಸಾಜ್ ನಿಂದ ಯಾವೆಲ್ಲಾ ಪ್ರಯೋಜನವಿದೆ ಗೊತ್ತಾ….?
ಸೌಂದರ್ಯ ವರ್ಧಕ ಮಳಿಗೆಗಳಲ್ಲಿ ಸಿಗುವ ಬ್ಲಾಟಿಂಗ್ ಪೇಪರ್ ಅನ್ನು ಕೊಂಡು ನಿಮ್ಮ ಜೊತೆ ಇಟ್ಟುಕೊಳ್ಳಿ. ಮುಖದಲ್ಲಿ ಎಣ್ಣೆ ಹೆಚ್ಚಾಗಿ ಕಾಣಿಸಿಕೊಂಡಾಗ ಈ ಪೇಪರ್ ನಿಂದ ನಿಮ್ಮ ಮುಖವನ್ನು ನಯವಾಗಿ ಒತ್ತಿಕೊಳ್ಳಿ. ಇದನ್ನು ಉಜ್ಜುವುದು ಬೇಡ, ಜಿಡ್ಡಿನಂಶವನ್ನು ಒತ್ತಿ ತೆಗೆದರೆ ಸಾಕು.
ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಿ. ಹೆಚ್ಚು ಎಣ್ಣೆಯಂಶ ಇರುವ ಪದಾರ್ಥಗಳನ್ನು ಸೇವಿಸದಿರಿ. ಇದರಿಂದ ಎಣ್ಣೆಯ ಅಂಶ ಹೆಚ್ಚು ಸ್ರವಿಸದಂತೆ ನೋಡಿಕೊಳ್ಳಬಹುದು. ಕ್ಲೇ ಮಾಸ್ಕ್ ಮಾಡಿಕೊಳ್ಳುವುದರಿಂದಲೂ ಎಣ್ಣೆ ಉತ್ಪತ್ತಿಯಾಗುವ ಪ್ರಮಾಣ ಕಡಿಮೆಯಾಗುತ್ತದೆ.