
ಎಣ್ಣೆ ತ್ವಚೆಯ ನಿಮ್ಮ ಮೇಕಪ್ ಸೌಂದರ್ಯವನ್ನು ಬಹುಬೇಗ ಹಾಳು ಮಾಡುತ್ತದೆ ಎಂಬ ಸಮಸ್ಯೆಯನ್ನು ಬಿಟ್ಟರೆ ಎಣ್ಣೆ ತ್ವಚೆಯಿಂದ ಪ್ರಯೋಜನಗಳೇ ಹೆಚ್ಚು. ಇದು ನಿಮ್ಮ ವಯಸ್ಸಾದ ಲಕ್ಷಣಗಳನ್ನು ದೂರ ಮಾಡುತ್ತದೆ. ದೀರ್ಘ ಕಾಲ ನಿಮ್ಮ ಸೌಂದರ್ಯವನ್ನು ಕಾಪಾಡುತ್ತದೆ.
ಅತಿ ಹೆಚ್ಚು ಎಣ್ಣೆ ತ್ವಚೆ ಇದ್ದರೆ ಅದರೊಂದಿಗೆ ಧೂಳು ಸೇರಿ ಫಂಗಲ್ ಇನ್ಫೆಕ್ಷನ್ ಉಂಟಾಗಬಹುದು. ಇಂಥ ಸಂದರ್ಭದಲ್ಲಿ ಕಡಿಮೆ ಕೆಮಿಕಲ್ ಇರುವ ಸೋಪ್ ಬಳಸಿ. ಜೊತೆಗೆ ಮನೆಯಲ್ಲೆ ಸಿಗುವ ಕೆಲವು ವಸ್ತುಗಳನ್ನು ಬಳಸಿ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಿ.
ಸುಂದರ ತ್ವಚೆಗೆ ಸುಲಭದ ಫೇಸ್ ಪ್ಯಾಕ್
ಬಾಳೆಹಣ್ಣಿನ ಪೇಸ್ಟ್ ಗೆ ಒಂದು ಚಮಚ ಜೇನುತುಪ್ಪ ಸೇರಿಸಿ, ನಿಂಬೆರಸ ಬೆರೆಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ. ಕನಿಷ್ಠ ಮೂವತ್ತು ನಿಮಿಷಗಳ ಬಳಿಕ ಮುಖ ತೊಳೆದುಕೊಂಡರೆ ಹೆಚ್ಚಿನ ಎಣ್ಣೆಯಂಶ ದೂರವಾಗುತ್ತದೆ. ಪಪ್ಪಾಯ ಹಣ್ಣು ಅಥವಾ ಕಲ್ಲಂಗಡಿ ಹಣ್ಣನ್ನು ಮುಖಕ್ಕೆ ತಿಕ್ಕಿಕೊಂಡರೆ ಅಥವಾ ಮಸಾಜ್ ಮಾಡಿದರೆ ನಾಲ್ಕಾರು ದಿನಗಳಲ್ಲಿ ನಿಮ್ಮ ತ್ವಚೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಕಡಲೆಹಿಟ್ಟಿನಿಂದಲೂ ಎಣ್ಣೆಯಂಶವನ್ನು ದೂರ ಮಾಡಬಹುದು. ಇದಕ್ಕೆ ಎರಡು ಚಮಚ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ಮುಖ ತೊಳೆಯುವುದರಿಂದ ಕಲೆಗಳೂ ದೂರವಾಗುತ್ತದೆ. ತ್ವಚೆ ಹೊಳಪು ಪಡೆದುಕೊಳ್ಳುತ್ತದೆ.