ಬಿಸಿ ವಾತಾವರಣವು ಚರ್ಮದ ರಂಧ್ರಗಳನ್ನು ಓಪನ್ ಮಾಡಿ ಅತಿಯಾಗಿ ತೈಲವನ್ನು ಉತ್ಪಾದನೆ ಮಾಡುತ್ತದೆ. ಇದರಿಂದ ಧೂಳು, ಮಾಲಿನ್ಯ ಮುಖದ ಮೇಲೆ ಕುಳಿತು ಹಲವು ಚರ್ಮದ ಸಮಸ್ಯೆಗೆ ಕಾರಣವಾಗುತ್ತವೆ. ಹಾಗಾಗಿ ಬೇಸಿಗೆಯಲ್ಲಿ ಎಣ್ಣೆ ಚರ್ಮ ಹೊಂದಿರುವವರು ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿ.
* ಬೇಸಿಗೆ ಕಾಲದಲ್ಲಿ ಎಣ್ಣೆ ಚರ್ಮ ಹೊಂದಿರುವವರು ಆಗಾಗ ಮುಖವನ್ನು ನೀರಿನಿಂದ ವಾಶ್ ಮಾಡಿ. ಇದರಿಂದ ಚರ್ಮದ ಸಮಸ್ಯೆ ಕಾಡುವುದಿಲ್ಲ.
* ತಪ್ಪದೇ ಸನ್ ಸ್ಕ್ರೀನ್ ಅನ್ನು ಬಳಸಿ. ಇದರಿಂದ ಬಿಸಿಲಿನ ಬೇಗೆಗೆ ಚರ್ಮ ಕಪ್ಪಾಗುವುದನ್ನು ತಡೆಯಬಹುದು. ಇದು ಚರ್ಮಕ್ಕೆ ರಕ್ಷಣೆ ಒದಗಿಸುತ್ತದೆ. ತೈಲ ಉತ್ಪಾದನೆಯನ್ನು ತಡೆಯುತ್ತದೆ.
* ಮುಖವನ್ನು ಸ್ಕ್ರಬ್ ಮಾಡಿ. ಇದರಿಂದ ಸತ್ತ ಚರ್ಮ ಕೋಶಗಳು ನಿವಾರಣೆಯಾಗಿ ಚರ್ಮ ಬಿರುಕು ಬಿಡುವುದು ಕಡಿಮೆಯಾಗುತ್ತದೆ.
* ಬೇಸಿಗೆಯಲ್ಲಿ ಮೇಕಪ್ ಹೆಚ್ಚು ಬಳಸಬೇಡಿ. ಇದರಿಂದ ಚರ್ಮ ರಂಧ್ರಗಳು ಮುಚ್ಚಿ ಮತ್ತಷ್ಟು ಹೆಚ್ಚು ಪರಿಣಾಮವನ್ನುಂಟು ಮಾಡುತ್ತದೆ.