ತ್ವಚೆ ಅಕರ್ಷಕವಾಗಿ ಕಾಣಲು ಮುಖದ ಮೇಲೆ ಎಣ್ಣೆ ಪಸೆ ಇರಬೇಕು. ಅದು ಹೆಚ್ಚಾದರೆ ನಿಮ್ಮ ವಯಸ್ಸನ್ನು ದ್ವಿಗುಣಗೊಳಿಸುತ್ತದೆ. ಎಣ್ಣೆಯೊಂದಿಗೆ ಧೂಳು ಬೆರೆತು ಮೊಡವೆ ಕಾಣಿಸಿಕೊಳ್ಳುತ್ತದೆ.
ಮುಖದ ಮೇಲಿನ ಎಣ್ಣೆ ನಿವಾರಣೆ ಮಾಡಲು ಬಾಳೆ ಹಣ್ಣನ್ನು ಕೈಯಿಂದ ಮ್ಯಾಶ್ ಮಾಡಿ ಅದಕ್ಕೆ ಒಂದು ಟೇಬಲ್ ಸ್ಪೂನ್ ಜೇನು ತುಪ್ಪವನ್ನು ಹಾಕಿ, ನಿಂಬೆ ರಸ ಸೇರಿಸಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ನಂತರ ಮುಖ ತೊಳೆದುಕೊಳ್ಳಬೇಕು ಇದರಿಂದ ಎಣ್ಣೆಯ ಅಂಶ ನಿವಾರಣೆ ಆಗುತ್ತದೆ ಹಾಗೂ ಮುಖದ ಸೌಂದರ್ಯ ಹೆಚ್ಚಾಗುತ್ತದೆ.
ಪಪ್ಪಾಯ ಹಣ್ಣು ಹಾಗೂ ಕಲ್ಲಂಗಡಿ ಹಣ್ಣಿನಿಂದ ಮಸಾಜ್ ಮಾಡುವುದರಿಂದ ಎಣ್ಣೆಯ ಚರ್ಮ ನಿವಾರಣೆಯಾಗಿ ಸೌಂದರ್ಯ ಹೆಚ್ಚುತ್ತದೆ. ದಿನಕ್ಕೆ ಮೂರು ನಾಲ್ಕು ಬಾರಿ ಕಡಲೆ ಹಿಟ್ಟಿನಿಂದ ಮುಖ ತೊಳೆಯುವುದರಿಂದ ಎಣ್ಣೆಯ ಚರ್ಮದ ಸಮಸ್ಯೆಯನ್ನು ದೂರ ಮಾಡಬಹುದು. ಕಿತ್ತಳೆ ಅಥವಾ ನಿಂಬೆ ಹಣ್ಣಿನ ಸಿಪ್ಪೆಯನ್ನು ಪುಡಿ ಮಾಡಿ ಪೇಸ್ಟ್ ರೀತಿಯಲ್ಲಿ ಮುಖಕ್ಕೆ ಹಚ್ಚಿಕೊಳ್ಳಬಹುದು.