ಬೊಜ್ಜು ಕರಗಿಸಬೇಕು ಅಂದುಕೊಂಡಿದ್ದೀರಾ…? ಮನೆಯಲ್ಲೇ ಕುಳಿತು ಕೆಲಸ ಮಾಡಿ, ತಿಂದುಂಡು ಬೆಳೆದ ದೇಹವನ್ನು ಸುಲಭದಲ್ಲಿ ಬಗ್ಗಿಸಲು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ಮನೆಯಲ್ಲೇ ಇರುವ ಈ ಸಾಮಾಗ್ರಿಗಳನ್ನು ಬಳಸಿ ನೋಡಿ.
ವ್ಯಾಯಾಮ, ಜಿಮ್, ವಾಕಿಂಗ್ ಜೊತೆ ಈ ವಸ್ತುಗಳನ್ನು ಸೇವಿಸಿ ನೋಡಿ. ಕರಿಮೆಣಸು ಮತ್ತು ಲವಂಗ ಬೆರೆಸಿದ ಕಷಾಯ ತಯಾರಿಸಿ ಕುಡಿಯುವುದರಿಂದ ದೇಹದ ತೂಕ ಇಳಿಕೆಯಾಗುತ್ತದೆ.
ಕರಿಮೆಣಸಿನಲ್ಲಿರುವ ಪೈಪರಿನ್ ಎಂಬ ಅಂಶ ಬೊಜ್ಜನ್ನು ಕಡಿಮೆ ಮಾಡುತ್ತದೆ. ಲವಂಗ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ರಾತ್ರಿ ವೇಳೆ ಕರಿಮೆಣಸು, ಲವಂಗ ನೆನೆಸಿಡಿ. ಬೆಳಿಗ್ಗೆ ಇದನ್ನು ಕುದಿಸಿ ಸೋಸಿ. ಬಳಿಕ ಲಿಂಬೆ ರಸ ಮತ್ತು ಉಪ್ಪು ಸೇರಿಸಿ ಕುಡಿಯಿರಿ.
ಇದರಿಂದ ದೇಹಕ್ಕೆ ಶಕ್ತಿ ಸಿಗುವುದು ಮಾತ್ರವಲ್ಲ ದೇಹದ ಹೆಚ್ಚುವರಿ ಬೊಜ್ಜು ಕರಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಗೆ ಇದನ್ನು ಸತತ ಒಂದು ತಿಂಗಳು ಕುಡಿದು ನೋಡಿ. ಯಾವುದೇ ಅಡ್ಡಪರಿಣಾಮಗಳಿಲ್ಲದ ಈ ಕಷಾಯ ನಿಮಗೆ ತೂಕ ಇಳಿಕೆಗೆ ನೆರವಾಗುವುದರಲ್ಲಿ ಸಂಶಯವಿಲ್ಲ.