alex Certify ಕೊರೊನಾ ಸೌಮ್ಯ ಲಕ್ಷಣ ಹೊಂದಿರುವವರು ಸೋಂಕಿನಿಂದ ಪಾರಾಗಲು ಬಳಸಿ ಈ ʼಮನೆ ಮದ್ದುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೌಮ್ಯ ಲಕ್ಷಣ ಹೊಂದಿರುವವರು ಸೋಂಕಿನಿಂದ ಪಾರಾಗಲು ಬಳಸಿ ಈ ʼಮನೆ ಮದ್ದುʼ

ಕೊರೊನಾದಿಂದ ಪಾರಾಗಲು ಮಾಸ್ಕ್​, ಸಾಮಾಜಿಕ ಅಂತರ, ಸ್ಯಾನಿಟೈಸರ್​ ಇವೆಲ್ಲವನ್ನ ಬಳಕೆ ಮಾಡಿದ ಬಳಿಕವೂ ಸೋಂಕಿನ ಅಪಾಯ ತಪ್ಪಿದ್ದಲ್ಲ. ನಮಗೆ ಅರಿವಿಲ್ಲದಂತೆಯೇ ಕೆಲವೊಮ್ಮೆ ಸೋಂಕು ನಮ್ಮ ದೇಹಕ್ಕೆ ವಕ್ಕರಿಸಿ ಬಿಡುತ್ತದೆ. ಸೌಮ್ಯ ಹಾಗೂ ಲಕ್ಷಣ ರಹಿತ ಸೋಂಕನ್ನ ಹೊಂದಿರುವ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯಲು ವೈದ್ಯರು ಸಲಹೆ ನೀಡ್ತಾರೆ.

ಇಂತಹ ಸಂದರ್ಭದಲ್ಲಿ ನೀವು ಮಾಡಬಹುದಾದ ಮನೆ ಮದ್ದುಗಳ ಬಗ್ಗೆ ವಿವರ ಇಲ್ಲಿದೆ ನೋಡಿ.

ನೀರಿಗೆ ಒಣ ಶುಂಠಿ ಹಾಗೂ ತುಳಸಿ ಎಲೆಯನ್ನ ಹಾಕಿ ಕುದಿಸಿ. ಅರ್ಧದಷ್ಟು ನೀರು ಆವಿಯಾಗುವರೆಗೂ ನೀರನ್ನ ಕುದಿಸಿ ಬಳಿಕ ಇದನ್ನ ದಿನಕ್ಕೆ ಹಲವು ಬಾರಿ ಕುಡಿಯಿರಿ.

ತಾಜಾ ಹಾಗೂ ಬಿಸಿ ಆಹಾರವನ್ನೇ ಸೇವಿಸಿ. ಕರಿದ ಆಹಾರಗಳನ್ನ ಸೇವಿಸಲೇಬೇಡಿ. ಹೆಸರು ಕಾಳು ಹಾಗೂ ಅನ್ನವನ್ನ ಸೇವಿಸಿ. ಪ್ರತಿ ಬಾರಿ ಊಟ ಮಾಡುವಾಗಲೂ ಗಡದ್ದಾಗಿ ತಿನ್ನಬೇಡಿ. ಅರ್ಧ ಹೊಟ್ಟೆ ಖಾಲಿ ಇರುವಂತೆಯೇ ನೋಡಿಕೊಳ್ಳಿ. ರಾತ್ರಿಯ ಊಟ 7 ಗಂಟೆಯ ಒಳಗೆ ಮಾಡಿ.

ಎಲ್ಲರಿಗೂ ತಿಳಿದಿರುವಂತೆ ಮಸಾಲಾ ಪದಾರ್ಥಗಳಲ್ಲಿ ಅಗಾಧ ಪ್ರಮಾಣದ ಪೋಷಕಾಂಶ ಅಡಗಿದೆ. ಹೀಗಾಗಿ ಚಕ್ಕೆ, ಕಾಳು ಮೆಣಸು, ಏಲಕ್ಕಿ, ಲವಂಗ ಹಾಗೂ ಸ್ಟಾರ್​ ಹೂವನ್ನ ಆಹಾರ ಕ್ರಮದಲ್ಲಿ ಸೇವನೆ ಮಾಡಿ. ಇದರ ಜೊತೆಯಲ್ಲಿ ಅರಿಶಿಣ ಹಾಗೂ ಒಣಶುಂಠಿ ಕೂಡ ನಿಮ್ಮ ಆಹಾರದಲ್ಲಿ ಸೇರ್ಪಡೆಯಾಗಿರಲಿ.

ರಾತ್ರಿ 8 ಗಂಟೆಗಳ ಕಾಲ ನಿದ್ದೆ ಮಾಡಿ. ಈ ಸಮಯದಲ್ಲಿ ಮಾಡುವ ನಿದ್ದೆಯು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಉತ್ತೇಜಿಸಲಿದೆ. ಆದಷ್ಟು ಬೆಳಗ್ಗೆ ಹೊತ್ತು ನಿದ್ದೆ ಮಾಡೋದನ್ನ ತಪ್ಪಿಸಿ.

ನೀವು ಲಕ್ಷಣ ರಹಿತ ಸೋಂಕನ್ನ ಹೊಂದಿದ್ದಲ್ಲಿ ದಾಳಿಂಬೆ, ಕಿತ್ತಳೆ ಹಾಗೂ ದ್ರಾಕ್ಷಿ ಹಣ್ಣನ್ನ ಸೇವನೆ ಮಾಡಿ. ನಿಮಗೆ ಲಕ್ಷಣಗಳು ಇದ್ದಲ್ಲಿ ಹಣ್ಣಿನ ಸೇವನೆಯನ್ನ ಮಾಡಲೇಬೇಡಿ.

ಬೇಯಿಸಿದ ತರಕಾರಿಯನ್ನೇ ಸೇವಿಸಿ. ಹಸಿಯಾದ ತರಕಾರಿ ಸೇವನೆ ಈ ವೇಳೆಯಲ್ಲಿ ಬೇಡ. ಟೊಮ್ಯಾಟೋ, ಆಲೂಗಡ್ಡೆ, ಬದನೆ ಕಾಯಿ ಸೇವನೆಯನ್ನ ಕೊಂಚ ಕಡಿಮೆ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...