ಉತ್ತರಾಖಂಡದ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್, ಮಹಿಳೆಯರು ಧರಿಸುವ ಹರಿದ ಜೀನ್ಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತ್ರ ರಿಪ್ಪೆಡ್ ಜೀನ್ಸ್ ಬಗ್ಗೆ ಸಾಕಷ್ಟು ವಾದ-ವಿವಾದಗಳು ಕೇಳಿ ಬರ್ತಿವೆ. ಅನೇಕ ವರ್ಷದಿಂದಲೂ ರಿಪ್ಪೆಡ್ ಜೀನ್ಸ್ ತನ್ನ ಫ್ಯಾಷನ್ ಉಳಿಸಿಕೊಂಡಿದೆ. ಕಲಾವಿದರು ಮಾತ್ರವಲ್ಲ ಯುವಕ-ಯುವತಿಯರು ಈ ಹರಿದ ಜೀನ್ಸ್ ಧರಿಸಲು ಇಷ್ಟಪಡ್ತಾರೆ. ಈ ಜೀನ್ಸ್ ಯಾವಾಗ ಪ್ರಸಿದ್ಧಿಯಾಯ್ತು ? ಹರಿದ ಜೀನ್ಸ್ ಬೆಲೆ ಎಷ್ಟು ದುಬಾರಿ ಎಂಬೆಲ್ಲ ಮಾಹಿತಿ ಇಲ್ಲಿದೆ.
ವಿಶ್ವದ ಮೊದಲ ಜೀನ್ಸ್ 1870 ರಲ್ಲಿ ಲೋಬ್ ಸ್ಟ್ರಾಸ್ ವಿನ್ಯಾಸಗೊಳಿಸಿದರು. ಬಲವಾದ ಮತ್ತು ಬಾಳಿಕೆ ಬರುವ ಈ ಪ್ಯಾಂಟ್‌ಗಳನ್ನು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ತಯಾರಿಸಲಾಯಿತು. ನೀಲಿ ಬಣ್ಣದಲ್ಲಿ ಮೊದಲ ಜೀನ್ಸ್ ಸಿದ್ಧವಾಗಿತ್ತು. ಅವುಗಳನ್ನು ಧರಿಸಿದವರನ್ನು ಕಾರ್ಮಿಕರೆಂದು ಗುರುತಿಸಬಹುದಾಗಿತ್ತು.
ಡೆನಿಮ್ ಬಟ್ಟೆಯ ವಿಶೇಷತೆಯೆಂದರೆ ಅದು ಬೇಸಿಗೆಯಲ್ಲಿ ಕಾಲುಗಳನ್ನುತಂಪಾಗಿರಿಸುತ್ತದೆ. ಚಳಿಗಾಲದಲ್ಲಿ ಬೆಚ್ಚನೆ ಅನುಭವ ನೀಡುತ್ತದೆ. ಹರಿದ ಜೀನ್ಸ್ ಫ್ಯಾಷನ್, ಸಾಮಾನ್ಯ ಜೀನ್ಸ್ ತಯಾರಾದ ಸುಮಾರು 100 ವರ್ಷಗಳ ನಂತರ ಬಂತು. 1970 ಕ್ಕಿಂತ ಮೊದಲು, ಹೊಸ ಜೀನ್ಸ್ ಖರೀದಿಸಲು ಸಾಧ್ಯವಾಗದ ಜನರು ಹರಿದ ಜೀನ್ಸ್ ಧರಿಸುತ್ತಿದ್ದರು. ಹರಿದ ಜೀನ್ಸ್ ಬಡವರ ಆಸ್ತಿಯಾಗಿತ್ತು.
70 ರ ದಶಕದಲ್ಲಿ ಪಂಕಪಹ್ನಾ ಬ್ರಾಂಡ್ ಗಳ ಸಂಸ್ಕೃತಿ ಉತ್ತುಂಗದಲ್ಲಿತ್ತು. ಹರಿದ ಜೀನ್ಸ್ ಧರಿಸುವುದು ಸಾಂಪ್ರದಾಯವನ್ನು ವಿರೋಧಿಸುವ ಸಾಧನವಾಯಿತು. ಪಾಪ್ ಸಂಸ್ಕೃತಿಯಿಂದಾಗಿ ಅನೇಕ ರಾಕ್‌ಸ್ಟಾರ್‌ಗಳು ಇದನ್ನು ವಿಶ್ವದಾದ್ಯಂತ ಪ್ರಸಿದ್ಧಗೊಳಿಸಿದರು. ಸಂಪ್ರದಾಯದ ವಿರೋಧವನ್ನು ಹಾಡಿನ ಮೂಲಕ ಹೇಳಲು ಅವರಿಗೆ ಹರಿದ ಜೀನ್ಸ್ ನೆರವಾಗಿತ್ತು. ಕ್ರಮೇಣ ಅಭಿಮಾನಿಗಳು ಇದನ್ನು ಇಷ್ಟಪಡಲು ಶುರು ಮಾಡಿದ್ದರು. ಕಂಪನಿಗಳು ಕೂಡ ಹರಿದ ಜೀನ್ಸ್ ತಯಾರಿಸಲು ಆಸಕ್ತಿ ತೋರಿದವು.
ಹಳೇ ಫ್ಯಾಷನ್ 2010ರಲ್ಲಿ ವಾಪಸ್ ಬಂತು. 80ರ ದಶಕದ ಅನೇಕ ಫ್ಯಾಷನ್ 2010ರಲ್ಲಿ ಮರಳಿ ಬಂದಿತ್ತು. ಹರಿದ ಜೀನ್ಸ್, ಬೆಲ್ ಬಾಟಮ್ ಹೀಗೆ ಅನೇಕ ಹಳೆ ಫ್ಯಾಷನ್ ವಾಪಸ್ ಆಗಿತ್ತು. ಈಗ ಎಲ್ಲ ಜೀನ್ಸ್ ಕಂಪನಿಗಳು ಹರಿದ ಜೀನ್ಸ್ ಮಾರುಕಟ್ಟೆಗೆ ಬಿಟ್ಟಿದ್ದು, ಯುವಕರ ಕಪಾಟಿನಲ್ಲಿ ಇದೊಂದು ಜೀನ್ಸ್ ಜಾಗ ಪಡೆದಿದೆ.
ಹರಿದ ಜೀನ್ಸನ್ನು ಎರಡು ರೀತಿಯಲ್ಲಿ ತಯಾರಿಸಲಾಗುತ್ತದೆ. ಲೇಸರ್ ಮತ್ತು ಕೈಗಳಿಂದ. ಜೀನ್ಸ್ ನಲ್ಲಿ ರಂಧ್ರಗಳನ್ನು ಮಾಡಲು ಲೇಸರ್ ಬಳಸಲಾಗುತ್ತದೆ. ಜೀನ್ಸ್ ಅನ್ನು ನೇರವಾಗಿ ಸ್ಟ್ಯಾಂಡ್‌ನಲ್ಲಿ ಅಂಟಿಸಿ ಅದರ ಮೇಲೆ ಲೇಸರ್ ಲೈಟ್ ಹಾಕಲಾಗುತ್ತದೆ. ಇದು ಅಗ್ಗದ ಬ್ರಾಂಡ್ ಗೆ ಲಭ್ಯವಿದೆ. ದುಬಾರಿ ಬ್ರಾಂಡ್‌ಗಳಾದರೆ ಕಾರ್ಮಿಕರು ಕತ್ತರಿ ಬಳಸುತ್ತಾರೆ. ವಿನ್ಯಾಸವನ್ನು ಮೊದಲು ಜೀನ್ಸ್ ಮೇಲೆ ಪೆನ್ ಅಥವಾ ಸೀಮೆಸುಣ್ಣದಿಂದ ಅಚ್ಚು ಹಾಕುತ್ತಾರೆ. ನಂತ್ರ ಅದನ್ನು ಕತ್ತರಿಸಲಾಗುತ್ತದೆ. ಈ ಜೀನ್ಸ್, ಸಾಮಾನ್ಯ ಜೀನ್ಸ್ ಗಿಂತ ಅಗ್ಗವಾಗಿರುತ್ತದೆ.