ಕೆಲವರು ಗುಂಪಿನಲ್ಲಿ ಇರುವುದನ್ನು ಹೆಚ್ಚು ಇಷ್ಟಪಡ್ತಾರೆ. ಮತ್ತೆ ಕೆಲವರು ಒಂಟಿತನವನ್ನು ಇಷ್ಟಪಡ್ತಾರೆ. ಕೆಲಸದ ಒತ್ತಡದ ಮಧ್ಯೆ ತಮಗೊಂದಿಷ್ಟು ಸಮಯ ಸಿಗಲಿ ಎಂದು ಎಲ್ಲರೂ ಬಯಸ್ತಾರೆ. ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ತಾರೆ. ತಮಗಿಷ್ಟ ಬಂದಂತೆ ಇರಲು ಬಯಸ್ತಾರೆ. ಮನೆಯಲ್ಲಿ ಒಂಟಿಯಾಗಿದ್ದಾಗ ಹುಡುಗರು ಮಾಡುವ ಕೆಲಸವೇ ಬೇರೆ. ಹುಡುಗಿಯರು ಮಾಡುವ ಕೆಲಸವೇ ಬೇರೆ. ಹುಡುಗಿಯರು ಮನೆಯಲ್ಲಿ ಒಂಟಿಯಾಗಿದ್ದಾಗ ಏನು ಮಾಡ್ತಾರೆ ಗೊತ್ತಾ?
ಎಲ್ಲರ ಮುಂದೆ ಬಿಗಿಯಾದ, ಮೈತುಂಬ ಬಟ್ಟೆ ಹಾಕಿಕೊಳ್ಳುವ ಹುಡುಗಿಯರು, ಒಂಟಿಯಾಗಿದ್ದಾಗ ಕಡಿಮೆ ಬಟ್ಟೆ ಧರಿಸಲು ಇಷ್ಟಪಡ್ತಾರೆ. ಅತಿ ಚಿಕ್ಕ ಬಟ್ಟೆ ಧರಿಸಿ ಎಂಜಾಯ್ ಮಾಡ್ತಾರೆ.
ಮಾಜಿ ಬಾಯ್ ಫ್ರೆಂಡ್ ಅಥವಾ ಇಷ್ಟಪಡುವ ಹುಡುಗ ಏನು ಮಾಡ್ತಾನೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಹುಡುಗಿಯರಿಗಿರುತ್ತದೆ. ಅವ್ರ ಫೋಟೋ ಅಥವಾ ಸಾಮಾಜಿಕ ಜಾಲತಾಣದಲ್ಲಿ ಅವರ ಕಮೆಂಟ್ ಗಳನ್ನು ಹುಡುಗಿಯರು ನೋಡ್ತಿರುತ್ತಾರೆ. ಆದ್ರೆ ಅದನ್ನು ಒಪ್ಪಿಕೊಳ್ಳುವುದಿಲ್ಲ.
ಎರಡು ಜಡೆ ಕೂಡಿದ್ರೆ ಜಗಳ ಎಂಬ ಮಾತಿದೆ. ಒಬ್ಬಂಟಿಯಾಗಿರುವಾಗ ಮಹಿಳೆ ಇನ್ನೊಂದು ಮಹಿಳೆ ಅಥವಾ ಸ್ನೇಹಿತೆ ಬಗ್ಗೆ ಆಲೋಚನೆ ಮಾಡ್ತಾಳೆ.
ಕೆಲವೇ ಕೆಲವು ಕ್ಷಣವಾದ್ರೂ ಒಂಟಿಯಾಗಿ ಜೀವಿಸಬೇಕೆಂದು ಅನೇಕರು ಬಯಸ್ತಾರೆ. ಮನೆಯಲ್ಲಿ ಒಂಟಿಯಾಗಿದ್ದಾಗ ಹುಡುಗರು ಮಾತ್ರವಲ್ಲ ಹುಡುಗಿಯರು ಕೂಡ ಬಾತ್ ರೂಮಿನ ಬಾಗಿಲು ಹಾಕುವುದಿಲ್ಲ.
ಕೆಲ ಹುಡುಗಿಯರಿಗೆ ಡಾನ್ಸ್ ತುಂಬಾ ಇಷ್ಟವಾಗುತ್ತದೆ. ಆದ್ರೆ ಎಲ್ಲರ ಮುಂದೆ ಡಾನ್ಸ್ ಮಾಡಲು ನಾಚಿಕೊಳ್ತಾರೆ. ಅಂತವರು ಮನೆಯಲ್ಲಿ ಒಬ್ಬರೇ ಇದ್ದಾಗ, ಮನಸ್ಸಿಗೆ ಬಂದಂತೆ ಕುಣಿಯುತ್ತಾರೆ.
ಕೆಲಸದ ಸಮಯದಲ್ಲಿ ತುಂಬಾ ಹೊತ್ತು ಸ್ನಾನ ಮಾಡಲು ಸಾಧ್ಯವಾಗುವುದಿಲ್ಲ. ಕೆಲಸವಿಲ್ಲದೆ ಬಿಡುವಿನ ದಿನಗಳಲ್ಲಿ ಹುಡುಗಿಯರು ಹೆಚ್ಚು ಸಮಯ ಸ್ನಾನ ಮಾಡ್ತಾರೆ.
ಹುಡುಗರು ಮಾತ್ರವಲ್ಲ ಕೆಲ ಹುಡುಗಿಯರು ಸೋಮಾರಿತನದಲ್ಲಿ ನಂಬರ್ ಒನ್ ಸ್ಥಾನದಲ್ಲಿರುತ್ತಾರೆ. ಅನೇಕ ದಿನಗಳ ಕಾಲ ಅವರು ಸ್ನಾನ ಮಾಡುವುದಿಲ್ಲ. ಆದ್ರೆ ಎಂದೂ ಈ ವಿಷ್ಯವನ್ನು ಒಪ್ಪಿಕೊಳ್ಳುವುದಿಲ್ಲ.
ಕಪಾಟಿನಲ್ಲಿರುವ ಎಲ್ಲ ಬಟ್ಟೆಯನ್ನು ತೆಗೆದು, ಅದನ್ನು ಧರಿಸಿ ನೋಡುವ ಕೆಲ ಹುಡುಗಿಯರಿದ್ದಾರೆ. ಎಲ್ಲ ಡ್ರೆಸ್ ಬರ್ತಿದೆಯಾ? ಎಂಬುದನ್ನು ಚೆಕ್ ಮಾಡುವ ಮೂಲಕ ತಮ್ಮ ತೂಕದ ಅಂದಾಜು ಮಾಡ್ತಾರೆ.
ಹುಡುಗಿಯರು ಒಂಟಿಯಾಗಿದ್ದಾಗ ಅಡಲ್ಟ್ ಚಿತ್ರವನ್ನು ಹೆಚ್ಚು ನೋಡ್ತಾರೆ. ಆದ್ರೆ ಈ ಬಗ್ಗೆ ಎಂದೂ ಬಾಯ್ಬಿಡುವುದಿಲ್ಲ.