![](https://kannadadunia.com/wp-content/uploads/2021/08/Pareja-1280x720-1.jpg)
ಸಾಮಾನ್ಯವಾಗಿ,ಮಹಿಳೆಯರು ಪುರುಷರಿಗಿಂತ ಕಡಿಮೆ ಲೈಂಗಿಕ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಕೆಲವು ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ತುಂಬಾ ಕಡಿಮೆಯಿರುತ್ತದೆ. ಇದು ಒಂದು ರೀತಿಯಲ್ಲಿ ಅನಾರೋಗ್ಯದ ಸೂಚನೆಯಾಗಿದೆ. ಇದ್ರಿಂದ ದಾಂಪತ್ಯದಲ್ಲಿ ಬಿರುಕು ಬರುವ ಸಾಧ್ಯತೆಯಿರುತ್ತದೆ.
ಕೆಲ ಆಹಾರವನ್ನು ಮಹಿಳೆಯರು ಅವಶ್ಯವಾಗಿ ಸೇವನೆ ಮಾಡಬೇಕು. ಈ ಆಹಾರ ಸೇವನೆ ಮಾಡುವುದ್ರಿಂದ ಮಹಿಳೆಯರ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ. ಮಹಿಳೆಯರ ಲೈಂಗಿಕ ಆಸಕ್ತಿ ಕಡಿಮೆಯಾಗಲು ಅನೇಕ ಕಾರಣವಿದೆ.
ಕಾಮದ ಮದದಲ್ಲಿ ಅಚಾತುರ್ಯ; ಸರಸದ ವೇಳೆ ಖಾಸಗಿ ಅಂಗ ಅಂಟಿಂದ ಸೀಲ್ ಮಾಡಿ ಜೀವಕ್ಕೇ ಕುತ್ತು
ಲೈಂಗಿಕ ಕ್ರಿಯೆ ವೇಳೆ ನೋವು, ಸಂಧಿವಾತ, ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿ ಸಮಸ್ಯೆ, ಕೆಲವು ಔಷಧಗಳ ಸೇವನೆ, ಕಳಪೆ ಜೀವನಶೈಲಿ, ಶಸ್ತ್ರಚಿಕಿತ್ಸೆ, ಹಾರ್ಮೋನುಗಳ ಅಸಮತೋಲನ ಇದೆಲ್ಲ ಕಾರಣವಾಗುತ್ತದೆ.
ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲು ಡಾರ್ಕ್ ಚಾಕೊಲೇಟ್ ಪ್ರಯೋಜನಕಾರಿ.ಇದನ್ನು ಲೈಂಗಿಕ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಡಾರ್ಕ್ ಚಾಕಲೇಟ್, ಮಹಿಳೆಯರ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ. ಚಾಕೊಲೇಟ್ ದೇಹದಲ್ಲಿ ಫೆನೆಥೈಲಮೈನ್ ಮತ್ತು ಸಿರೊಟೋನಿನ್ ರಾಸಾಯನಿಕಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮಿಲ್ಕ್ ಕ್ರೇಟ್ ಚಾಲೆಂಜ್ ಕೇಳಿದ್ದೀರಾ…? ಸವಾಲು ಸ್ವೀಕರಿಸೋ ಮುನ್ನ ಹುಷಾರ್
ಬಾಳೆಹಣ್ಣಿನ ಸೇವನೆಯು ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣು ಪೊಟ್ಯಾಸಿಯಮ್‌ನ ಮುಖ್ಯ ಮೂಲವಾಗಿದೆ. ಸ್ಟೋಸ್ಟೆರಾನ್ ಪುರುಷ ಲೈಂಗಿಕ ಹಾರ್ಮೋನ್. ಆದರೆ ಇದು ಮಹಿಳೆಯರಲ್ಲಿಯೂ ಇರುತ್ತದೆ. ಸಣ್ಣ ಪ್ರಮಾಣದಲ್ಲಿ ಇದು ಲೈಂಗಿಕ ಪ್ರಚೋದನೆಯನ್ನುಂಟು ಮಾಡುತ್ತದೆ.
ಇದಲ್ಲದೆ ರಕ್ತ ಪರಿಚಲನೆ ಸುಧಾರಿಸುವ ವ್ಯಾಯಾಮಗಳನ್ನು ಮಾಡಬೇಕು. ಒತ್ತಡವನ್ನು ಕಡಿಮೆ ಮಾಡಲು ಧ್ಯಾನ ಮಾಡಬೇಕು. ಸಂಗಾತಿಯೊಂದಿಗೆ ಮಾತನಾಡುವ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಸಾಕಷ್ಟು ನಿದ್ರೆ ಮಾಡಬೇಕು. ವೈದ್ಯರೊಂದಿಗೆ ಮಾತನಾಡಿ ಹಾರ್ಮೋನ್ ಗೆ ಸಂಬಂಧಿಸಿದ ಚಿಕಿತ್ಸೆ ಪಡೆಯಬೇಕು.