ಸೀಸನಲ್ ಫ್ರುಟ್ ಆಗಿರುವ ನೇರಳೆ ಹಣ್ಣನ್ನು ಮಧುಮೇಹಿಗಳು ಸೇವಿಸುವುದು ಬಹಳ ಒಳ್ಳೆಯದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದು ನಿಜವೇ…., ಇದರ ಸೇವನೆಯಿಂದ ಯಾವ ಪ್ರಯೋಜನವಿದೆ..? ತಿಳಿಯೋಣ.
ನೇರಳೆ ಹಣ್ಣು ರಕ್ತವನ್ನು ಶುದ್ಧೀಕರಿಸುತ್ತದೆ, ರಕ್ತಹೀನತೆಯನ್ನು ದೂರ ಮಾಡುತ್ತದೆ. ರಕ್ತದೊತ್ತಡ ತಗ್ಗಿಸಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ದೂರ ಮಾಡುತ್ತದೆ ಎನ್ನಲಾಗಿದೆ. ಅದೇ ರೀತಿ ಅದರ ಜ್ಯೂಸ್ ಕುಡಿಯುವುದರಿಂದಲು ನೀವು ಈ ಲಾಭಗಳನ್ನು ಪಡೆದುಕೊಳ್ಳಬಹುದು.
ನಿಮ್ಮ ಬೊಜ್ಜಿನ ಸಮಸ್ಯೆ ಹಿಂದಿರಬಹುದು ಈ ಕಾರಣ
ಇದರ ಜ್ಯೂಸ್ ತಯಾರಿಸುವ ವೇಳೆ ಸಕ್ಕರೆ, ಚಿಟಿಕೆ ಉಪ್ಪು, ನಿಂಬೆರಸ, ಹಾಗೂ ಚಿಟಿಕೆ ಚಾಟ್ ಮಸಾಲೆ ಬೆರೆಸಿ. ಬೀಜ ತೆಗೆದ ನೇರಳೆ ಹಣ್ಣನ್ನು ರುಬ್ಬಿ. ಬಳಿಕ ಉಳಿದ ಸಾಮಾಗ್ರಿಗಳನ್ನು ಸೇರಿಸಿ. ಆರೋಗ್ಯಕರ ಈ ಜ್ಯೂಸ್ ಅನ್ನು ವಾರದಲ್ಲಿ ಮೂರು ಬಾರಿ ಸೇವಿಸಿ. ಮಧುಮೇಹಿಗಳು ಸಕ್ಕರೆ ಬೆರೆಸದೆ ಕುಡಿಯಿರಿ.
ಮನೆಯಲ್ಲೆ ಮಾಡಬಹುದು ʼಬಟರ್ ನಾನ್ʼ
ಇದು ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನೂ ನಿವಾರಿಸುತ್ತದೆ. ಪೈಲ್ಸ್ ಸಮಸ್ಯೆ ಇರುವವರು ಇದನ್ನು ಆಗಾಗ ಕುಡಿಯುತ್ತಿರುವುದು ಒಳ್ಳೆಯದು. ಕಣ್ಣಿನ ಆರೋಗ್ಯವನ್ನೂ ಕಾಪಾಡುವ ಈ ಪಾನೀಯವನ್ನು ಮಕ್ಕಳಿಗೂ ಕುಡಿಸಬಹುದು.