alex Certify ನಿಮ್ಮನ್ನು ಬೇಗನೆ ಕೊಂದುಬಿಡುತ್ತವೆ ರೆಡಿ ಟು ಈಟ್‌ ಫುಡ್ಸ್‌: ಸಂಶೋಧನೆಯಲ್ಲಿ ಬಹಿರಂಗವಾಗಿದೆ ಆಘಾತಕಾರಿ ಸತ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಬೇಗನೆ ಕೊಂದುಬಿಡುತ್ತವೆ ರೆಡಿ ಟು ಈಟ್‌ ಫುಡ್ಸ್‌: ಸಂಶೋಧನೆಯಲ್ಲಿ ಬಹಿರಂಗವಾಗಿದೆ ಆಘಾತಕಾರಿ ಸತ್ಯ….!

ಫ್ರೆಶ್‌ ಆಗಿ ತಯಾರಿಸಿದ ತಿನಿಸುಗಳು ಆರೋಗ್ಯಕ್ಕೆ ಉತ್ತಮ ಅನ್ನೋದು ಗೊತ್ತಿದ್ದರೂ ನಾವು ಮೊದಲೇ ಪ್ಯಾಕ್‌ ಮಾಡಿಟ್ಟ ಸೂಪ್‌, ಸಾಸ್‌ಗಳು, ಫ್ರೀಝ್‌ ಮಾಡಿಟ್ಟ ಪಿಜ್ಜಾ, ರೆಡಿ ಟು ಈಟ್‌ ಅಲ್ಟ್ರಾಪ್ರೊಸೆಸ್ಡ್ ಆಹಾರಗಳನ್ನು ಸೇವಿಸುತ್ತೇವೆ. ಇವುಗಳನ್ನು ಪ್ರತಿದಿನ ತಿನ್ನುವ ಅಭ್ಯಾಸ ಮಾಡಿಕೊಂಡ್ರೆ ಸಾವು ಬಹಳ ಬೇಗನೆ ಬರಬಹುದು. ಸಂಶೋಧನೆಯೊಂದರಲ್ಲಿ ಈ ಅಂಶ ದೃಢಪಟ್ಟಿದೆ. ಬ್ರೆಜಿಲ್‌ನಲ್ಲಿ 10 ಪ್ರತಿಶತಕ್ಕೂ ಹೆಚ್ಚು ತಡೆಗಟ್ಟಬಹುದಾದ ಸಾವುಗಳಿಗೆ ಸಂಬಂಧಿಸಿದಂತೆ ಈ ಸಂಶೋಧನೆಯನ್ನು ಮಾಡಲಾಗಿದೆ.

ಯಾವುದೇ ಅಲ್ಟ್ರಾಪ್ರೊಸೆಸ್ಡ್ ಆಹಾರಗಳು ಸಂಪೂರ್ಣವಾಗಿ ಖಾದ್ಯವಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಇದರಿಂದಾಗಿಯೇ 2019 ರಲ್ಲಿ ಬ್ರೆಜಿಲ್‌ನಲ್ಲಿ 57,000 ಜನರು ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ತಾಜಾ ಹಾಗೂ ಸಂಸ್ಕರಿಸಿದ ಆಹಾರಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ತಜ್ಞರ ಪ್ರಕಾರ ಪ್ರೊಸೆಸ್ಡ್‌ ಫುಡ್‌ನಲ್ಲಿರುವ ಸೋಡಿಯಂ, ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬುಗಳು, ಸಿಹಿ ಪಾನೀಯಗಳಂತಹ ನಿರ್ದಿಷ್ಟ ಪದಾರ್ಥಗಳಿಂದ ಅಪಾಯ ಹೆಚ್ಚು. ಅಲ್ಟ್ರಾಪ್ರೊಸೆಸ್ಡ್ ಆಹಾರಗಳ ಸೇವನೆಯಿಂದ ಉಂಟಾಗುವ ಸಾವುಗಳ ಬಗ್ಗೆ ಸಂಶೋಧನೆ ನಡೆದಿದೆ.

ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ರೋಗವನ್ನು ತಡೆಗಟ್ಟುವುದರ ಜೊತೆಗೆ ಅಕಾಲಿಕ ಮರಣವನ್ನು ತಡೆಯುತ್ತವೆ ಎನ್ನುತ್ತಾರೆ ತಜ್ಞರು. ಅತಿಯಾಗಿ ಸಂಸ್ಕರಿಸಿದ ಆಹಾರಗಳಾದ ಪ್ರಿ ಪ್ಯಾಕ್ಡ್‌ ಸೂಪ್‌, ಸಾಸ್‌ಗಳು, ಫ್ರೀಝ್‌ ಮಾಡಿರವ ಪಿಜ್ಜಾ, ಮೊದಲೇ ಪ್ಯಾಕ್‌ ಮಾಡಿಟ್ಟ ಊಟ, ಹಾಟ್ ಡಾಗ್‌ಗಳು, ಸಾಸೇಜ್‌ಗಳು, ಸೋಡಾ, ಐಸ್ ಕ್ರೀಮ್ ಮತ್ತು ಅಂಗಡಿಯಲ್ಲಿ ಖರೀದಿಸಿದ ಕುಕೀಗಳು, ಕೇಕ್‌, ಕ್ಯಾಂಡಿ ಮತ್ತು ಡೋನಟ್ಸ್ ಇವೆಲ್ಲವೂ ಅಪಾಯಕಾರಿ. 2019ರಲ್ಲಿ 30 ರಿಂದ 69 ವರ್ಷ ವಯಸ್ಸಿನ ಒಟ್ಟು 5,41,260 ವಯಸ್ಕರು ಅಕಾಲಿಕ ಮರಣಕ್ಕೆ ಒಳಗಾಗಿದ್ದಾರೆ.

ಇವರಲ್ಲಿ 2,61,061 ತಡೆಗಟ್ಟಬಹುದಾದ, ಸಾಂಕ್ರಾಮಿಕವಲ್ಲದ ರೋಗಗಳು. ಆ ವರ್ಷದಲ್ಲಿ ಸುಮಾರು 57,000 ಸಾವುಗಳು ಅಲ್ಟ್ರಾಪ್ರೊಸೆಸ್ಡ್ ಆಹಾರಗಳ ಸೇವನೆಯಿಂದ ಉಂಟಾಗಿರಬಹುದೆಂದು ಸಂಶೋಧಕರು ಅಂದಾಜಿಸಿದ್ದಾರೆ. ಅಮೆರಿಕ, ಕೆನಡಾ, ಬ್ರಿಟನ್‌ ಮತ್ತು ಆಸ್ಟ್ರೇಲಿಯಾದಂತಹ ಉನ್ನತ ಆದಾಯದ ದೇಶಗಳಲ್ಲಿ ಅಲ್ಟ್ರಾಪ್ರೊಸೆಸ್ಡ್ ಆಹಾರಗಳು ಒಟ್ಟು ಕ್ಯಾಲೊರಿ ಸೇವನೆಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಹೊಂದಿವೆ. ಇದರ ಪರಿಣಾಮ ಭಯಾನಕವಾಗಿರುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಅತಿಯಾಗಿ ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ ಆರೋಗ್ಯಕರ ಆಹಾರದ ಆಯ್ಕೆಗಳನ್ನು ಉತ್ತೇಜಿಸಲು ಕ್ರಮಗಳ ಅಗತ್ಯವಿದೆ. ಅಲ್ಟ್ರಾಪ್ರೊಸೆಸ್ಡ್ ಆಹಾರಗಳ ಸೇವನೆಯು ಸ್ಥೂಲಕಾಯತೆ, ಹೃದ್ರೋಗ, ಮಧುಮೇಹ, ಕ್ಯಾನ್ಸರ್‌ ಸೇರಿದಂತೆ ಅನೇಕ ಮಾರಕ ಕಾಯಿಲೆಗಳಿಗೂ ಕಾರಣವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...