ಚಳಿಗಾಲವೆಂದರೆ ಶೀತಕ್ಕೆ ಸ್ವಾಗತ ಕೋರುವ ಕಾಲವೆಂದೇ ಅರ್ಥ. ಬೆಳಗಿನ ಗಾಳಿಗೆ ಸ್ವಲ್ಪ ಒಗ್ಗಿಕೊಂಡರೆ ಸಾಕು ಹತ್ತಾರು ಸೀನು ಬಂದು ಮೂಗಲ್ಲಿ ಸೊರಸೊರ ನೀರು ಇಳಿಯಲಾರಂಭಿಸುತ್ತದೆ. ಇದಕ್ಕೆ ಕಾರಣ ಹಾಗೂ ಪರಿಹಾರಗಳನ್ನು ತಿಳಿಯೋಣ.
ಚಳಿಗಾಲದಲ್ಲಿ ಬೆಚ್ಚಗಿನ ಆಹಾರ ಸೇವಿಸುವುದರಿಂದ ಶೀತ ಸಂಬಂಧಿ ಸಮಸ್ಯೆಗಳು ಹತ್ತಿರವೂ ಸಮೀಪಿಸುವುದಿಲ್ಲ. ನೀರಿನಾಂಶ ಹೆಚ್ಚಿರುವ ಆಹಾರ ಸೇವನೆ ಮಾಡುವುದರಿಂದ ಮತ್ತು ತಾಜಾ ಆಹಾರಕ್ಕೆ ಮಹತ್ವ ಕೊಡುವುದರಿಂದ ಚಳಿಗಾಲದ ಶೀತದ ಸಮಸ್ಯೆಯಿಂದ ದೂರವಿರಬಹುದು.
ಹಸಿಯಾಗಿ ಅಥವಾ ಬೇಯಿಸಿದ ರೂಪದಲ್ಲಿ ಬೆಳ್ಳುಳ್ಳಿ ಸೇವನೆಯಿಂದಲೂ ನೀವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಬೆಳ್ಳುಳ್ಳಿಯನ್ನು ಸೂಪ್ ರೂಪದಲ್ಲಿ ಸೇವಿಸಿ ಅಥವಾ ಅದಕ್ಕೆ ಕಲ್ಲುಸಕ್ಕರೆ ಬೆರೆಸಿ ಜಗಿದು ತಿಂದರೂ ಮೂಗು ಸೋರುವುದು ನಿಲ್ಲುತ್ತದೆ.
ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳನ್ನು ಸೇವಿಸಿ. ಕಿತ್ತಳೆ ಹಾಗೂ ನಿಂಬೆಯಲ್ಲಿ ಶೀತ ಮತ್ತು ಕೆಮ್ಮುನ್ನು ನಿವಾರಣೆ ಮಾಡುವ ಗುಣವಿದ್ದು ಇದನ್ನು ಫ್ರಿಡ್ಜ್ ನಲ್ಲಿಡದೆ ನೇರವಾಗಿ ಸೇವಿಸುವುದರಿಂದ ಹಲವು ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.