ಈಗ ಕುಕ್ಕರ್ ಕೂಗದೆ ಯಾರ ಮನೆಯಲ್ಲೂ ಬೆಳಗಾಗುವುದಿಲ್ಲ. ಕೆಲವರು ಪ್ರಶರ್ ಕುಕ್ಕರ್ ನಲ್ಲಿ ಬೇಯಿಸುವುದರಿಂದ ಆಹಾರಗಳು ಪೌಷ್ಠಿಕ ಸತ್ವ ಕಳೆದುಕೊಳ್ಳುತ್ತದೆ ಎಂದರೆ ಇನ್ನು ಕೆಲವರು ಪೌಷ್ಟಿಕಾಂಶ ಅದರೊಳಗೆ ಉಳಿಯುತ್ತದೆ ಎನ್ನುತ್ತಾರೆ. ಹಾಗಿದ್ದರೆ ಯಾವುದು ಸತ್ಯ…?
ಹಿಂದಿನ ಕಾಲದಂತೆ ಒಲೆಗೆ ಬೆಂಕಿ ಮಾಡಿ, ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆಂದು ಇಂದು ಪ್ರತಿಯೊಬ್ಬರೂ ಇದನ್ನು ಅನುಸರಿಸಲು ಸಾಧ್ಯವೇ…?
ಕುಕ್ಕರ್ ನಲ್ಲಿ ಆಹಾರ ಪದಾರ್ಥಗಳು ಅತಿಯಾದ ಒತ್ತಡ ಮತ್ತು ನೀರಿನ ಆವಿಯಲ್ಲಿ ಬೇಯುತ್ತವೆ. ಹಾಗಾಗಿ ಕುಕ್ಕರ್ ನಲ್ಲಿ ಎಷ್ಟು ಬೇಕೋ ಅಷ್ಟೇ ಬೇಯಿಸಿ ತಕ್ಷಣ ಆಫ್ ಮಾಡಬೇಕು. ಅಂದರೆ ಹೆಚ್ಚು ವಿಷಲ್ ಕೂಗಿಸಿದಷ್ಟೂ ಅದರ ಸತ್ವಗಳು ನಾಶವಾಗುತ್ತವೆ.
ಪ್ರತಿಯೊಂದಕ್ಕೂ ಕುಕ್ಕರ್ ಅನ್ನು ಅವಲಂಬಿಸುವುದು ಒಳ್ಳೆಯದಲ್ಲ. ಅನ್ನ ಅಥವಾ ಬೇಳೆ ಬೇಯಿಸಿಕೊಳ್ಳಲು ಕುಕ್ಕರ್ ಬಳಸಿ. ಉಳಿದಂತೆ ತರಕಾರಿಗಳನ್ನು ನೇರವಾಗಿ ಬೇಯಿಸಿ. ಪ್ರತಿಯೊಂದಕ್ಕೂ ಕುಕ್ಕರ್ ಅನ್ನುಅವಲಂಬಿಸದಿರಿ.