ಅಕ್ಕಿ ಮತ್ತು ಬೇಳೆಗಳಿಗೆ ಭಾರತೀಯ ಆಹಾರ ಪದ್ಧತಿಯಲ್ಲಿ ಬಹಳ ಮಹತ್ವವಿದೆ. ಬೇಳೆ ಸಾರು ಅಥವಾ ದಾಲ್ ಇಲ್ಲದೇ ಭಾರತೀಯರ ಊಟವೇ ಅಪೂರ್ಣ. ಭಾರತದ ವಿವಿಧ ಸ್ಥಳಗಳಲ್ಲಿ ದಾಲ್ ಅನ್ನು ವಿಭಿನ್ನ ರೀತಿಯಲ್ಲಿ ತಯಾರಿಸಲಾಗುತ್ತದೆ. ಆದರೆ ಅನೇಕರಿಗೆ ದಾಲ್ ಸೇವಿಸುವುದರಿಂದ ಹೊಟ್ಟೆ ಉಬ್ಬರಿಸುತ್ತದೆ. ಸರಿಯಾಗಿ ಜೀರ್ಣವಾಗುವುದಿಲ್ಲ.
ಇದಕ್ಕೆ ಕಾರಣ ನಾವು ಬೇಳೆ ಬೇಯಿಸುವ ಕುಕ್ಕರ್ ಅನ್ನೋದು ಬಹಿರಂಗವಾಗಿದೆ. ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆ ಕಾಳುಗಳನ್ನು ಬೇಯಿಸುವುದರಿಂದ ಅದರಲ್ಲಿರುವ ಯೂರಿಕ್ ಆಮ್ಲವು ಹೆಚ್ಚಾಗುತ್ತದೆ.
ಸಪೋನಿನ್, ಪ್ರೋಟೀನ್ ಮತ್ತು ಪಿಷ್ಟದ ಕಾರಣದಿಂದಾಗಿ ಬೇಳೆಗಳ ಮೇಲೆ ನೊರೆ ಅಥವಾ ಫೋಮ್ ರೂಪುಗೊಳ್ಳುತ್ತದೆ. ಈ ಸಪೋನಿನ್ ಸೀಮಿತ ಪ್ರಮಾಣದಲ್ಲಿ ಬೇಳೆಕಾಳುಗಳಲ್ಲಿ ಕಂಡುಬರುತ್ತದೆ. ಇವು ನಮ್ಮ ದೇಹಕ್ಕೆ ಅಪಾಯಕಾರಿಯಲ್ಲ. ಇದು ಆ್ಯಂಟಿಒಕ್ಸಿಡೆಂಟ್‌ನಂತೆ ಕೆಲಸ ಮಾಡುತ್ತದೆ. ನೀವು ಪ್ರೆಶರ್ ಕುಕ್ಕರ್‌ನಲ್ಲಿ ದಾಲ್ ಅನ್ನು ಬೇಯಿಸುವ ಸಂದರ್ಭದಲ್ಲಿ ಈ ನೊರೆಯನ್ನು ತೆಗೆದುಹಾಕುವ ಅಗತ್ಯವಿಲ್ಲ.
ದೇಹದಲ್ಲಿ ಯೂರಿಕ್ ಆಮ್ಲವು ಹೆಚ್ಚಾದರೆ ಅದರ ನಿಯಂತ್ರಣವನ್ನು ನೀರಿನಿಂದ ಪ್ರಾರಂಭಿಸಬೇಕು. ಅವಕಾಶ ಸಿಕ್ಕಾಗಲೆಲ್ಲಾ ಸಾಕಷ್ಟು ನೀರು ಕುಡಿಯಿರಿ. ಆಹಾರವನ್ನು ನಿಯಂತ್ರಿಸಿ. ತಿನ್ನುವಾಗ ನೀವು ಏನನ್ನು ಮತ್ತು ಎಷ್ಟು ತಿನ್ನುತ್ತಿದ್ದೀರಿ ಎಂಬುದನ್ನು ನೆನಪಿನಲ್ಲಿಡಿ. ಇದರಿಂದ ಯೂರಿಕ್ ಆಮ್ಲ ನಿಯಂತ್ರಣದಲ್ಲಿರುತ್ತದೆ.
ಕೆಲವು ದ್ವಿದಳ ಧಾನ್ಯಗಳಲ್ಲಿ ಕಡಿಮೆ ಪ್ರಮಾಣದ ಪ್ಯೂರಿನ್ ಇರುತ್ತದೆ. ಹಾಗಾಗಿ ಹಸಿರು ಅಥವಾ ಕಂದು ಕಾಳುಗಳನ್ನು ಆರಿಸಿಕೊಳ್ಳಿ. ಅದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕುಕ್ಕರ್ ಬದಲು ಬೇಳೆ ಕಾಳುಗಳನ್ನು ನೇರವಾಗಿ ಬೇಯಿಸುವುದು ಉತ್ತಮ.