ಓಮಿಕ್ರಾನ್ ಈ ಹಿಂದಿನ ಕೋವಿಡ್-19 ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ ಹರಡುವುದರಿಂದ, ಮಾಸ್ಕ್ ಧರಿಸುವುದು ಇದೀಗ ಹೆಚ್ಚು ಮುಖ್ಯವಾಗಿದೆ. ಆದರೆ, ಮುಖಗವಸಿನ ಗುಣಮಟ್ಟವು ತುಂಬಾ ಮುಖ್ಯವಾಗಿದೆ.
ಈ ತಿಂಗಳ ಆರಂಭದಲ್ಲಿ, ಕೋವಿಡ್ -19 ವೈರಸ್‌ನ ಓಮಿಕ್ರಾನ್ ರೂಪಾಂತರವು ಭಾರತದಲ್ಲಿ ವೇಗವಾಗಿ ಹರಡುತ್ತದೆ ಎಂದು ಕೆಲವು ತಜ್ಞರು ಹೇಳಿದ್ದರು.
ಕೋವಿಡ್ -19 ಪ್ರಕರಣಗಳಲ್ಲಿ ದೈನಂದಿನ ಏರಿಕೆಯ ಹೊರತಾಗಿಯೂ, ಕೆಲವೇ ಜನರು ಮಾತ್ರ ಮಾಸ್ಕ್ ಧರಿಸುವ ಮೂಲಕ ಮಾನದಂಡಗಳನ್ನು ಅನುಸರಿಸುತ್ತಿದ್ದಾರೆ. ಆದರೆ, ಹಲವಾರು ಮಂದಿ ಫೇಸ್ ಮಾಸ್ಕ್ ಅನ್ನು ತಪ್ಪಾಗಿ ಧರಿಸುತ್ತಿದ್ದಾರೆ. ಒಂದು ವೇಳೆ ನೀವು ಬಟ್ಟೆಯ ಮುಖಗವಸನ್ನು ಧರಿಸುತ್ತಿದ್ದರೆ, ಇದು ನಿಮಗೆ ಸುರಕ್ಷಿತವಲ್ಲ.
ಜಾರಕಿಹೊಳಿ ಬ್ರದರ್ಸ್ ಆಟಕ್ಕೆ ಮತ್ತೆ ಮುದುಡಿದ ಕಮಲ: ಸ್ಥಳೀಯ ಸಂಸ್ಥೆಯಯಲ್ಲೂ ಬಿಜೆಪಿಗೆ ಬಿಗ್ ಶಾಕ್
ಹೌದು, ಓಮಿಕ್ರಾನ್ ರೂಪಾಂತರದ ವಿರುದ್ಧ ಬಟ್ಟೆಯ ಮಾಸ್ಕ್ ಪರಿಣಾಮಕಾರಿಯಾಗಿರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಜನರು ಎನ್95 ಅಥವಾ ಮೂರು ಪದರದ ಸರ್ಜಿಕಲ್ ಮಾಸ್ಕ್ ಗಳನ್ನು ಧರಿಸಬೇಕು.
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಎನ್ 95 ಉಸಿರಾಟಕಾರಕಗಳು ಶೇಕಡಾ 95 ರಷ್ಟು ಗಾಳಿಯ ಹನಿಗಳು ಮತ್ತು ಕಣಗಳನ್ನು ಫಿಲ್ಟರ್ ಮಾಡಬಹುದು. ಮೂರು ಪದರದ ಸರ್ಜಿಕಲ್ ಮಾಸ್ಕ್ ಧರಿಸುವುದರಿಂದ ಬಟ್ಟೆಯ ಮುಖಗವಸುಗಿಂತ, ಗಾಳಿಯಲ್ಲಿ ಸೋಂಕಿತ ಹನಿಗಳ ಸಂಪರ್ಕವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಎನ್ 95 ಮುಖಗವಸುಗಳನ್ನು ಧರಿಸುವುದರಿಂದ ಕೋವಿಡ್-19 ಮತ್ತು ಹೆಚ್ಚುತ್ತಿರುವ ವಾಯು ಮಾಲಿನ್ಯ ಎರಡರಿಂದಲೂ ಹೆಚ್ಚಿನ ರಕ್ಷಣೆಯನ್ನು ಒದಗಿಸಬಹುದು. ಅಲರ್ಜಿ, ಅಸ್ತಮಾ ಅಥವಾ ಇತರ ಯಾವುದೇ ಉಸಿರಾಟದ ಸಮಸ್ಯೆಯನ್ನು ಹೊಂದಿರುವವರು ಈ ಮಾಸ್ಕ್ ಅನ್ನು ಧರಿಸುವುದು ಉತ್ತಮ ಎಂದು ವರದಿ ತಿಳಿಸಿದೆ. ಹೀಗಾಗಿ ಬಟ್ಟೆ ಮಾಸ್ಕ್ ಗಿಂತ ಎನ್ 95 ಮಾಸ್ಕ್ ಬಳಸುವುದು ಉತ್ತಮವೆಂದು ತಜ್ಞರ ಅಭಿಮತ.