ಹೆಸರಿನಲ್ಲೇನಿದೆ ಎಂದು ಅನೇಕರು ಪ್ರಶ್ನೆ ಮಾಡುತ್ತಾರೆ. ಆದ್ರೆ ನಿಮ್ಮ ಹೆಸರು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂಬ ವಿಷ್ಯ ನಿಮಗೆ ಗೊತ್ತಾ? ನಿಮ್ಮ ಹೆಸರಿನ ಮೊದಲ ಅಕ್ಷರಕ್ಕೂ ನಿಮ್ಮ ಸ್ವಭಾವ, ಭವಿಷ್ಯಕ್ಕೂ ಸಂಬಂಧವಿದೆ. ಬೇರೆಯವರು ನಿಮ್ಮನ್ನು ಕೂಗುವ ಹೆಸರು ನಿಮ್ಮ ಸ್ವಭಾವ, ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಂದು ಅಕ್ಷರಕ್ಕೂ ಅದರದೇ ಆದ ಮಹತ್ವವಿದೆ. ಎ ಅಕ್ಷರದಿಂದ ಹೆಸರು ಶುರುವಾಗುವ ವ್ಯಕ್ತಿಗಳ ಬಗ್ಗೆ ಇಂದು ಹೇಳ್ತೆವೆ.
ಎ ಇಂಗ್ಲೀಷ್ ನ ಮೊದಲ ಅಕ್ಷರ. ಹಾಗಾಗಿಯೇ ಅದನ್ನು ನಂಬರ್ 1 ಸ್ಥಾನ ಸಿಕ್ಕಿದೆ. ಎ ಅಕ್ಷರದಿಂದ ಹೆಸರು ಶುರುವಾಗುವ ವ್ಯಕ್ತಿಗಳು ಬಲವಂತರು ಹಾಗೂ ಶಕ್ತಿವಂತರಾಗಿರುತ್ತಾರೆ. ಯಾವುದೇ ಪರಿಸ್ಥಿತಿಯನ್ನಾದ್ರೂ ಸಂಭಾಳಿಸಿಕೊಂಡು ಹೋಗುತ್ತಾರೆ. ಹಾಗೆ ಇಡೀ ವಿಶ್ವವನ್ನೇ ಸಂಭಾಳಿಸುವ ಶಕ್ತಿ ಹೊಂದಿರುತ್ತಾರೆ.
ಇವರು ಜವಾಬ್ದಾರಿಯನ್ನು ಹೊರಲು ಬಯಸ್ತಾರೆ. ಹಾಗೆ ತಮ್ಮದೆ ನಿಯಮ ರೂಪಿಸಲು ಆಸಕ್ತಿ ಹೊಂದಿರುತ್ತಾರೆ. ಆತ್ಮವಿಶ್ವಾಸ, ದೃಢ ಪ್ರತಿಜ್ಞೆ, ಧೈರ್ಯಶಾಲಿ ವ್ಯಕ್ತಿಗಳಾಗಿರುತ್ತಾರೆ. ಸಾಹಸವನ್ನು ಅವರು ಇಷ್ಟಪಡ್ತಾರೆ. ಕೆಲವೊಮ್ಮೆ ಕುಗ್ಗಿ ಹೋದ್ರೂ ಅದನ್ನು ಇವರು ತೋರಿಸಿಕೊಳ್ಳುವುದಿಲ್ಲ. ಯಾವಾಗ್ಲೂ ಧೈರ್ಯಶಾಲಿ ಎಂದು ತೋರಿಸಿಕೊಳ್ಳಲು ಬಯಸುತ್ತಾರೆ. ಉದ್ಯಮಿ, ಶಿಕ್ಷಕ, ಸಂಶೋಧಕ, ನಾಯಕತ್ವದ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಬೇರೆಯವರನ್ನು ಕಡಿಮೆ ಉತ್ಸಾಹಿಯಂತೆ ನೋಡುವ ಅವರು ಬೇರೆಯವರನ್ನು ನಿರುತ್ಸಾಹಗೊಳಿಸುತ್ತಾರೆ.