HomeLatest Newsಹೊಸ ವಿವಾದ ಸೃಷ್ಟಿಸಿದ ಲೆನ್ಸ್ ಕಾರ್ಟ್ ಸ್ಟೈಲ್ ಗೈಡ್: ಧರ್ಮ ತಾರತಮ್ಯ ಎಂದು ಆಕ್ರೋಶ

ಹೊಸ ವಿವಾದ ಸೃಷ್ಟಿಸಿದ ಲೆನ್ಸ್ ಕಾರ್ಟ್ ಸ್ಟೈಲ್ ಗೈಡ್: ಧರ್ಮ ತಾರತಮ್ಯ ಎಂದು ಆಕ್ರೋಶ

ನವದೆಹಲಿ: ಜನಪ್ರಿಯ ಕನ್ನಡಕದ ಕಂಪನಿ ಲೆನ್ಸ್ ಕಾರ್ಟ್ ತನ್ನ ಉದ್ಯೋಗಿಗಳಿಗೆ ನೀಡಿರುವ ಸ್ಟೈಲ್ ಗೈಡ್ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಲೆನ್ಸ್ ಕಾರ್ಟ್ ನ ಈ ವರ್ಷ ತನ್ನ ಉದ್ಯೋಗಿಗಳಿಗೆ ರೂಪಿಸಿರುವ ನಿಯಮ ಆಕ್ಷೇಪಾರ್ಹವಾಗಿದ್ದು, ಧರ್ಮ ತಾರತಮ್ಯಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಲೆನ್ಸ್ ಕಾರ್ಟ್ ಪಾಲಿಸಿ ಡಾಕ್ಯೂಮ್,ಎಂಟ್ ನಲ್ಲಿ ತನ್ನ ಉದ್ಯೋಗಿಗಳಿಗೆ ಹಿಜಾಬ್, ಕಪ್ಪು ಪೇಟಾ ಧರಿಸಲು ಅವಕಾಶ ನೀಡಿದೆ. ಆದರೆ ಸಿಂಧೂರ, ಕುಂಕುಮ, ಹಣೆಬೊಟ್ಟು ಇಡಲು ಅವಕಾಶ ನೀಡಿಲ್ಲ. ಈ ನಿಯಮ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಲೆನ್ಸ್​ಕಾರ್ಟ್ ಸ್ಟೈಲ್​ಗೈಡ್​ನಲ್ಲಿರುವ ವಿವಾದಿತ ಅಂಶಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉದ್ಯೋಗಿಗಳು ಕಪ್ಪು ಬಣ್ಣದ ಪೇಟ (sikh turban) ಧರಿಸಬಹುದು.
ಕಪ್ಪು ಬಣ್ಣದ ಹಿಜಾಬ್ ಧರಿಸಬಹುದು
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಟ್ಯಾಟೂಗಳನ್ನು ಹಾಕಿಕೊಂಡಿದ್ದರೆ ಅದು ಕಣ್ಣಿಗೆ ಗೋಚರಿಸದಂತಿರಬೇಕು.
ಹೆನ್ನಾ (ಗೋರಂಟಿ) ಹಾಕುವಂತಿಲ್ಲ. ವಿಶೇಷ ಸಂದರ್ಭವಿದ್ದರೆ ಮುಂಚಿತವಾಗಿ ಅನುಮತಿ ಪಡೆಯಬೇಕು.
ಧಾರ್ಮಿಕ ತಿಲಕ, ಹಣಬೊಟ್ಟು ಹಾಕುವಂತಿಲ್ಲ – ಎಂದು ತಿಳಿಸಿದೆ.

ಲೆನ್ಸ್ ಕಾರ್ಟ್ ನ ಈ ಸ್ಟೈಲ್ ಗೈಡ್ ನಿಯಮಗಳೇ ಈಗ ವಿವಾದಕ್ಕೆ ಕಾರಣವಾಗಿದೆ. ಲೆನ್ಸ್​ಕಾರ್ಟ್​ನ ಉದ್ಯೋಗಿಗಳ ಸ್ಟೈಲ್​ಗೈಡ್​ನಲ್ಲಿರುವ ಧಾರ್ಮಿಕ ಸೂಕ್ಷ್ಮತೆ ಇರುವ ನಿಯಮಗಳ ಬಗ್ಗೆ ಆನ್​ಲೈನ್​ನಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿದೆ. ಲೆನ್ಸ್ ಕಾರ್ಟ್ ಕಂಪನಿ ತನ್ನ ಉದ್ಯೋಗಿಗಳಿಗೆ ಹಿಜಾಬ್​ಗೆ ಅನುಮತಿ ಕೊಟ್ಟಿದೆ. ಆದರೆ, ಹಿಂದೂ ಉದ್ಯೋಗಿಗಳಿಗೆ ಕುಂಕುಮ, ಹಣೆಬೊಟ್ಟು ಇಡಲು ಅವಕಾಶ ನೀಡಲಾಗಿಲ್ಲ ಯಾಕೆ? ಎಂದು ಹಲವರು ಪ್ರಶ್ನಿಸಿದ್ದಾರೆ.

ಇದು ಮೂರ್ಖತನ. ಲೆನ್ಸ್​ಕಾರ್ಟ್ ನ ಈ ನಿಯಮ ಖಂಡನೀಯ. ಬಿಂದಿಯಲ್ಲಿ ಏನು ತಪ್ಪು ಕಂಡಿದ್ದಾರೆ. ಅವರಿಗೆ ಭಾರತದಲ್ಲಿ ಬ್ಯುಸಿನೆಸ್ ಮಾಡಬೇಕು, ಆದರೆ ಜನರ ಭಾವನೆಗಳಿಗೆ ಬೆಲೆ ಕೊಡುವುದು ಬೇಡ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೆನ್ಸ್​ಕಾರ್ಟ್ ನ ಹೊಸ ನಿಯಮಗಳು ಭಾಅರಿ ವಿವಾದಕ್ಕೆ ಕಾರಣವಗುತ್ತಿಂದತೆ ಕಂಪನಿ ಸಂಸ್ಥಾಪಕರು ಕೆಲ ಸ್ಪಷ್ಟನೆ ನೀಡಿದ್ದಾರೆ. ಲೆನ್ಸ್​ಕಾರ್ಟ್ ಸಂಸ್ಥೆಯ ಸಂಸ್ಥಾಪಕ ಪಿಯುಸ್ ಬನ್ಸಾಲ್ ಅವರು ವೈರಲ್ ಆಗುತ್ತಿರುವ ದಾಖಲೆಯು ಸರಿಯಿಲ್ಲ. ನಮ್ಮ ಈಗಿನ ಮಾರ್ಗಸೂಚಿಗಳನ್ನು ಇದು ಪ್ರತಿಬಿಂಬಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಆದರೆ ಅವರ ಹೇಳಿಕೆಗಳಿಗೂ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿದ್ದು, ಲೆನ್ಸ್​ಕಾರ್ಟ್​ನ ಈ ಪಾಲಿಸಿ ಡಾಕ್ಯುಮೆಂಟ್ 2026ರ ಫೆಬ್ರುವರಿಯದ್ದು. ಈಗ ಬದಲಾಗಿರುವ ಪಾಲಿಸಿ ಡಾಕ್ಯುಮೆಂಟ್ ಇದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular