HomeBeautyನಿಂಬೆ ಸಿಪ್ಪೆ ಹೀಗೆ ಬಳಸಿದರೆ ದುಪ್ಪಟ್ಟಾಗುತ್ತೆ ನಿಮ್ಮ ತ್ವಚೆಯ ಕಾಂತಿ

ನಿಂಬೆ ಸಿಪ್ಪೆ ಹೀಗೆ ಬಳಸಿದರೆ ದುಪ್ಪಟ್ಟಾಗುತ್ತೆ ನಿಮ್ಮ ತ್ವಚೆಯ ಕಾಂತಿ

ನಿಂಬೆ ಹಣ್ಣಿನ ಸಿಪ್ಪೆಯನ್ನು ಉಪಯೋಗವಿಲ್ಲ ಎಂದು ಎಸೆಯುತ್ತಾರೆ. ಆದರೆ ಇದು ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನಿಶಿಯಂ, ಮುಂತಾದ ಖನಿಜಗಳನ್ನು ಒಳಗೊಂಡಿರುವುದರಿಂದ ಇದರಿಂದ ಮಹಿಳೆಯರ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

*ಚರ್ಮವನ್ನು ಸ್ಕ್ರಬ್ ಮಾಡಲು ನಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಈ ಪುಡಿಗೆ ಸಕ್ಕರೆ, ಜೇನುತುಪ್ಪ, ತೆಂಗಿನ ಹಾಲನ್ನು ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ. ಇದರಿಂದ ಸತ್ತ ಚರ್ಮ ಕೋಶ ನಿವಾರಣೆಯಾಗಿ ಚರ್ಮ ಹೊಳೆಯುತ್ತದೆ.

* ಬೇಸಿಗೆಯಲ್ಲಿ ಚರ್ಮ ಹೆಚ್ಚು ಎಣ್ಣೆಯುಕ್ತವಾಗುತ್ತಿದ್ದರೆ ಅದನ್ನು ನಿವಾರಿಸಲು 1 ಚಮಚ ನಿಂಬೆ ಸಿಪ್ಪೆ ಪುಡಿಗೆ, ರೋಸ್ ವಾಟರ್, ಮೊಸರು, 1 ಚಮಚ ಕಡಲೆಹಿಟ್ಟನ್ನು ಸೇರಿಸಿ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ. ಇದರಿಂದ ಚರ್ಮ ಹೊಳಪು ಹೆಚ್ಚಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular