HomeBeautyತುಟಿಗಳು ಒಡೆಯುವುದರಿಂದ ಪಾರಾಗಲು ಇಲ್ಲಿದೆ ಸುಲಭ ಟಿಪ್ಸ್...!

ತುಟಿಗಳು ಒಡೆಯುವುದರಿಂದ ಪಾರಾಗಲು ಇಲ್ಲಿದೆ ಸುಲಭ ಟಿಪ್ಸ್…!

ಚಳಿಗಾಲ ಬಂತೆಂದರೆ ಚರ್ಮದ ಸಮಸ್ಯೆಗಳೂ ಶುರುವಾಗುತ್ತವೆ. ತುಟಿಗಳು ಒಡೆಯುವುದು, ಕಪ್ಪಗಾಗುವುದು ಇವೆಲ್ಲ ಚಳಿಗಾಲದಲ್ಲೇ ಹೆಚ್ಚು. ಚಳಿಗಾಲದಲ್ಲಿ ಶುಷ್ಕತೆ ಹೆಚ್ಚಾಗಿರುವುದರಿಂದ ತುಟಿಗಳು ಒಣಗಿ ಒಡೆಯಲಾರಂಭಿಸುತ್ತವೆ. ಒಡೆದ ತುಟಿಗಳು ನಮ್ಮ ಮುಖದ ಅಂದವನ್ನೇ ಹಾಳು ಮಾಡುತ್ತವೆ. ಕಿರಿಕಿರಿಯನ್ನು ಉಂಟು ಮಾಡುತ್ತವೆ.

ತುಟಿಗಳ ಬಿರುಕಿಗೆ ಕಾರಣ ತಿಳಿದುಕೊಂಡರೆ ಪರಿಹಾರ ಹುಡುಕುವುದು ಕೂಡ ಸುಲಭ. ಕೆಲವು ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು. ತುಟಿಗಳು ಮೃದುವಾಗಿರಬೇಕೆಂದಯ ನೀವು ಬಯಸಿದರೆ ಒಡೆದ ತುಟಿಗಳನ್ನು ಸರಿಪಡಿಸಲು ಈ ಕೆಳಗಿನ ಮನೆಮದ್ದುಗಳನ್ನು ಪ್ರಯತ್ನಿಸಿ.  ಚಳಿಗಾಲದಲ್ಲಿ ಒಣ ಗಾಳಿ ಬೀಸುವುದರಿಂದ ತುಟಿಗಳು ಬಿರುಕು ಬಿಡುತ್ತವೆ.ಅತಿಯಾದ ಸೂರ್ಯನ ಬೆಳಕು ಕೂಡ ತುಟಿಗಳು ಬಿರುಕಿಗೆ ಕಾರಣವಾಗಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲವೊಮ್ಮೆ ದೇಹದಲ್ಲಿ ನೀರಿನ ಕೊರತೆಯಿದ್ದರೆ ಈ ಸಮಸ್ಯೆಯಾಗುತ್ತದೆ. ಚಳಿಗಾಲದಲ್ಲಿ ನಾವು ಕಡಿಮೆ ನೀರು ಕುಡಿಯುವುದರಿಂದ ನಮ್ಮ ತುಟಿಗಳು ಬಿರುಕು ಬಿಡುತ್ತವೆ. ಹಾಗಾಗಿ ಚೆನ್ನಾಗಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಚಳಿಗಾಲದಲ್ಲಿ ಲಿಪ್‌ಸ್ಟಿಕ್‌ನಂತಹ ಗಟ್ಟಿಯಾದ ಉತ್ಪನ್ನಗಳ ಬಳಕೆ ಕೂಡ ತುಟಿಗಳಿಗೆ ಹಾನಿ ಮಾಡಬಹುದು. ಅವುಗಳ ಬಳಕೆಯನ್ನು ತಪ್ಪಿಸಿ. ತುಟಿಗಳನ್ನು ತೇವಗೊಳಿಸದಿದ್ದರೆ ಅವು ಬೇಗನೆ ಬಿರುಕು ಬಿಡುತ್ತವೆ. ಆದ್ದರಿಂದ ತುಟಿಗಳಿಗೆ ಮಾಯಿಶ್ಚರೈಸರ್ ಅಥವಾ ಲಿಪ್ ಬಾಮ್ ಹಚ್ಚಿಕೊಳ್ಳಿ.

ತುಟಿಗಳನ್ನು ಮೃದುವಾಗಿಡಲು ಮನೆಮದ್ದುಗಳು

ಅನೇಕ ರಾಸಾಯನಿಕಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಳಸುವುದರಿಂದ ತುಟಿಗಳು ಬಿರುಕು ಬಿಡಬಹುದು. ಈ ವಸ್ತುಗಳನ್ನು ತುಟಿಗಳ ಮೇಲೆ ಹಚ್ಚುವುದರಿಂದ ಅವು ಕಪ್ಪಾಗಬಹುದು. ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸಿ ನಾವು ತುಟಿಗಳ ಶುಷ್ಕತೆಯನ್ನು ಹೋಗಲಾಡಿಸಬಹುದು ಮತ್ತು ಒಡೆದ ತುಟಿಗಳನ್ನು ಮೃದುಗೊಳಿಸಬಹುದು.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿರುವ ಗುಣಲಕ್ಷಣಗಳು ತುಟಿಗಳು ಮತ್ತು ಚರ್ಮವನ್ನು ಮೃದುವಾಗಿಸುತ್ತವೆ. ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ತುಟಿಗಳಿಗೆ ಹಚ್ಚಿ ಐದು ನಿಮಿಷಗಳ ಕಾಲ ತುಟಿಗಳಿಗೆ ಮಸಾಜ್ ಮಾಡಿ. ಇದರಿಂದ ತುಟಿಗಳ ಚರ್ಮವು ಮೃದುವಾಗುತ್ತದೆ. ಬಾದಾಮಿ ಎಣ್ಣೆಯನ್ನು ಬಳಸುವುದರಿಂದ ತುಟಿಗಳು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ.

ಹಾಲಿನ ಕೆನೆ

ಕೆನೆ ಹಚ್ಚುವುದರಿಂದ ತುಟಿಗಳು ಕೆನೆಯಂತೆ ಮೃದುವಾಗುತ್ತದೆ. ಪ್ರತಿನಿತ್ಯ ಮಲಗುವ ಮುನ್ನ ತುಟಿಗಳ ಮೇಲೆ ಕೆನೆ ಹಚ್ಚಿ, ಇದು ಎಲ್ಲಾ ರೀತಿಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ನೀವು ಪರಿಮಳಕ್ಕಾಗಿ ಕೆನೆಯೊಂದಿಗೆ ರೋಸ್ ವಾಟರ್ ಅನ್ನು ಸಹ ಬಳಸಬಹುದು.

ಅರಿಶಿನ ಮತ್ತು ಹಾಲು

ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಮತ್ತು ಅದನ್ನು ತುಟಿಗಳಿಗೆ ಹಚ್ಚಿ. ಪ್ರತಿದಿನ ರಾತ್ರಿ ಇದೇ ರೀತಿ ತುಟಿಗಳ ಮೇಲೆ ಅರಿಶಿನವನ್ನು ಬಳಸುವುದರಿಂದ ತುಟಿಗಳ ಗಾಯವೂ ತುಂಬುತ್ತದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯನ್ನು ಒಡೆದ ತುಟಿಗಳನ್ನು ಗುಣಪಡಿಸಲು ಬಳಸಬಹುದು. ತೆಂಗಿನ ಎಣ್ಣೆಯನ್ನು ದಿನಕ್ಕೆ 2-3 ಬಾರಿ ಲಿಪ್ ಬಾಮ್ ರೀತಿಯಲ್ಲಿ ಹಚ್ಚಿಕೊಳ್ಳಿ. ಇದರಿಂದ ತುಟಿಗಳ ಚರ್ಮವು ಮೃದುವಾಗಿರುತ್ತದೆ ಮತ್ತು ನೋವಿನಿಂದ್ಲೂ ಪರಿಹಾರ ಸಿಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular