ನವದೆಹಲಿ: ಕೊರೊನಾ ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ನೀಡುವ ರೆಮ್ ಡಿಸಿವರ್ ಜನರಿಕ್ ಅವತರಣಿಕೆಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.
ಜೈಡಸ್ ಕ್ಯಾಡಿಲಾ ಕಂಪನಿ ಜನರಿಕ್ ಅವತರಣಿಕೆಯನ್ನು ಬಿಡುಗಡೆ ಮಾಡಿದ್ದು. ಭಾರತದ ಮಾರುಕಟ್ಟೆಯಲ್ಲಿ 100 ಎಂಜಿ ಔಷಧ ಬಾಟಲಿಗೆ 5400 ರೂ., ಜೈಡಸ್ ಕ್ಯಾಡಿಲಾ ಕಂಪನಿ ಬಿಡುಗಡೆ ಮಾಡಿದ ರೆಮ್ಡಾಕ್ ಜನರಿಕ್ ಅವತರಣಿಕೆಗೆ 100 ಎಂಜಿ ಬಾಟಲಿಗೆ 2800 ರೂಪಾಯಿ ದರ ನಿಗದಿ ಮಾಡಲಾಗಿದೆ.
ದೇಶದಲ್ಲಿ ಲಭ್ಯವಿರುವ ರೆಮ್ ಡಿಸಿವರ್ ಜನರಿಕ್ ಅವತರಣಿಕೆಯಲ್ಲಿ ಅತ್ಯಂತ ಕಡಿಮೆ ಬೆಲೆಯ ಔಷಧ ಇದಾಗಿದೆ ಎಂದು ಹೇಳಲಾಗಿದೆ. ಕೊರೊನಾ ಸೋಂಕಿತರಿಗೆ ದೇಶದಲ್ಲಿ ಚಿಕಿತ್ಸೆ ನೀಡಲಾಗುತ್ತಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಔಷಧ ಪೂರೈಕೆ ಮಾಡಲಾಗುವುದು.
ಸುಲಭವಾಗಿ ರೋಗಿಗಳಿಗೆ ಔಷಧಿ ಸಿಗಲಿದೆ ಎಂದು ಕಂಪನಿ ತಿಳಿಸಿದೆ. ಅಮೆರಿಕದ ಗಿಲೇಡ್ ಸೈನ್ಸ್ ಕಂಪನಿಯು ರೆಮ್ ಡಿಸಿವರ್ ಅಭಿವೃದ್ಧಿಪಡಿಸಿದ್ದು ಜೈಡಸ್ ಕ್ಯಾಡಿಲಾ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.