ಅನೇಕ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಪ್ರಕ್ರಿಯೆ ಮುಂದುವರೆದಿದ್ದು, ಸೇವೆಗಳ ಬೇಡಿಕೆ ನಿಧಾನವಾಗಿರುವುದರಿಂದ ಜೂಮ್ ವಿಡಿಯೋ ಕಮ್ಯುನಿಕೇಷನ್ಸ್ ಇಂಕ್ 1,300 ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ.
ವಜಾಗೊಳಿಸುವಿಕೆಯು ಕಂಪನಿಯ ಸುಮಾರು 15% ಉದ್ಯೋಗಿಗಳ ಮೇಲೆ ಪರಿನಾಮ ಬೀರಲಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಯುವಾನ್ ಅವರು ವೇತನ ಕಡಿತ ಮತ್ತು ಮುಂಬರುವ ಆರ್ಥಿಕ ವರ್ಷಕ್ಕೆ ಬೋನಸ್ ನೀಡದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಘೋಷಣೆಯೊಂದಿಗೆ, ಜಾಗತಿಕ ಆರ್ಥಿಕ ಕುಸಿತದ ಮಧ್ಯೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ ಟೆಕ್ ಸಂಸ್ಥೆಗಳ ಬೆಳೆಯುತ್ತಿರುವ ಪಟ್ಟಿಗೆ ಜೂಮ್ ಕೂಡ ಸೇರಿಕೊಂಡಿದೆ. ಹಿಂದಿನ ಸೋಮವಾರ, ಡೆಲ್ ಇಂಕ್ 6.500 ಉದ್ಯೋಗಗಳನ್ನು ಅಥವಾ ಅದರ ಜಾಗತಿಕ ಉದ್ಯೋಗಿಗಳ ಶೇಕಡಾ 5 ರಷ್ಟು ತೆಗೆದುಹಾಕುವುದಾಗಿ ಘೋಷಿಸಿತು.