ಹೊಸ ಸ್ಟುಡಿಯೋ ಎಫೆಕ್ಟ್‌ಗಳ ಫೀಚರ್ ಕೊಟ್ಟಿರುವ ವಿಡಿಯೋ ಕಾನ್ಫರೆನ್ಸಿಂಗ್ ಕಿರು ತಂತ್ರಾಂಶ ಝೂಮ್, ಲೈವ್ ವಿಡಿಯೋ ಕರೆಗಳಲ್ಲಿ ಭಾಗಿಯಾಗುವ ಮುನ್ನ ಜನರಿಗೆ ಇನ್ನಷ್ಟು ಅಂದವಾಗಿ ಕಾಣುವ ಅವಕಾಶ ಕೊಟ್ಟಿದೆ.
ಈ ಫೀಚರ್ ಇನ್ನೂ ತನ್ನ ಬೀಟಾ ಅವತಾರದಲ್ಲೇ ಇದ್ದು, ಬಹಳಷ್ಟು ಮಂದಿ ಅಪ್ಲಿಕೇಶನ್ ಬಳಕೆದಾರರು ಈ ಫೀಚರ್‌ಗಳನ್ನು ಬಳಸುತ್ತಿದ್ದಾರೆ. ವಿಡಿಯೋ ಕರೆದಾರರು ಕಾನ್ಫರೆನ್ಸ್ ವೇಳೆ ಕಣ್ಣಿನ ಹುಬ್ಬುಗಳು, ಮುಖದ ಕೂದಲು, ತುಟಿಯ ಬಣ್ಣ ಸೇರಿದಂತೆ ಸಾಕಷ್ಟು ಟಚ್‌ಅಪ್‌ಗಳನ್ನು ಮಾಡಿಕೊಳ್ಳಬಹುದಾಗಿದೆ.
8ನೇ ತರಗತಿ ಬಾಲಕ ಕೊಟ್ಟ ಮಾಹಿತಿ ಮೇಲೆ ಮರ ಕಡಿದ ವ್ಯಕ್ತಿಗೆ ದಂಡ
ವಿಡಿಯೋ ಸೆಶನ್ ಆರಂಭಿಸುತ್ತಲೇ, ’ಬ್ಯಾಕ್ ಗ್ರೌಂಡ್ & ಫಿಲ್ಟರ್‌ಗಳು’ ಆಯ್ಕೆ ಮಾಡಿ, ಬಲಗಡೆಯ ಕೆಳ ಮೂಲೆಯಲ್ಲಿರುವ ’ಸ್ಟುಡಿಯೋ ಎಫೆಕ್ಟ್ಸ್ (ಬೀಟಾ)’ ಆರಿಸಿ ತಮಗೆ ಬೇಕಾದ ಎಫೆಕ್ಟ್ ಅನ್ನು ಬಳಕೆದಾರರು ಆಯ್ದುಕೊಳ್ಳಬಹುದಾಗಿದೆ.
ಸದ್ಯಕ್ಕೆ ಈ ಫೀಚರ್ ಡೆಸ್ಕ್ ಟಾಪ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದ್ದು, ಝೂಮ್‌ನ ಆಯ್ದ ಬಳಕೆದಾರರು ಮಾತ್ರವೇ ಬಳಸಬಹುದಾಗಿದೆ.