ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಲಾಭ ನೀಡಿದ ನಂತರ, ಆನ್‌ಲೈನ್ ಆಹಾರ ವಿತರಣಾ ಅಪ್ಲಿಕೇಶನ್ ಜೊಮಾಟೊ ಕೆಲ ವಿಶೇಷ ಗ್ರಾಹಕರಿಗೆ Zomato Pro Plus ಸದಸ್ಯತ್ವದ ಹೊಸ ಸೇವೆಯನ್ನು ಆರಂಭಿಸಲಿದೆ.
ಜೊಮಾಟೊ ಕೆಲವು ಅದೃಷ್ಟ ಬಳಕೆದಾರರಿಗೆ ಆಹ್ವಾನ ಕಳುಹಿಸಲಿದೆ. ಆ ಗ್ರಾಹಕರು ಜೊಮಾಟೊ ಪ್ರೊ ಪ್ಲಸ್ ಸದಸ್ಯತ್ವವನ್ನು ಸಕ್ರಿಯಗೊಳಿಸಬಹುದು. ಇದ್ರ ನಂತ್ರ ಜೊಮಾಟೊ ಪ್ರೊ ಪ್ಲಸ್ ಬಳಕೆದಾರರು ಅನಿಯಮಿತ ಉಚಿತ ವಿತರಣೆಯನ್ನು ಪಡೆಯಲಿದ್ದಾರೆ. ಜೊಮಾಟೊ ಸಹ-ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಈ ಮಾಹಿತಿ ನೀಡಿದ್ದಾರೆ.
ಅಮೆಜಾನ್ ಈಗಾಗಲೇ ತನ್ನ ಪ್ರೈಮ್ ಸದಸ್ಯರಿಗೆ ಉಚಿತ ವಿತರಣೆಯ ಸೌಲಭ್ಯವನ್ನು ಒದಗಿಸುತ್ತಿದೆ. ಜೊಮಾಟೊ ಈ ಸೌಲಭ್ಯವು ಬಳಕೆದಾರರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ. ಸಾಮಾನ್ಯ ಬಳಕೆದಾರರು ಜೊಮಾಟೊ ಆಪ್‌ನಿಂದ ಪ್ರೊ ಪ್ಲಸ್ ಅಪ್‌ಗ್ರೇಡ್ ಖರೀದಿಸಬೇಕಾಗುತ್ತದೆ. ಜೊಮಾಟೊ ಪ್ರೊ ಪ್ಲಸ್ ಸದಸ್ಯರಿಗೆ ವಿಶೇಷ ಸೌಲಭ್ಯ ಸಿಗಲಿದೆ. ಜೊಮಾಟೊ ಪ್ರೊ ಪ್ಲಸ್ ಸದಸ್ಯತ್ವವು ಭಾರತದ 41 ನಗರಗಳಲ್ಲಿ ಲಭ್ಯವಿರಲಿದೆ.
ಕೆಲವು ವಾರಗಳ ಹಿಂದೆ, ಜೊಮಾಟೊ ಗೋಲ್ಡ್, ಜೊಮಾಟೊ ಪ್ರೊಗೆ ಅಪ್‌ಗ್ರೇಡ್ ಆಗಿದೆ. ಜೊಮಾಟೊ ಪ್ರೊ ಬಳಕೆದಾರರು ಆಹಾರದ ಮೇಲೆ ಶೇಕಡಾ 40ರಷ್ಟು ರಿಯಾಯಿತಿ ಪಡೆಯಲಿದ್ದಾರೆ. ಆರ್ಡರ್ ಮೇಲೆ ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಜೊಮಾಟೊ ಪ್ರೊ ಸದಸ್ಯತ್ವಕ್ಕಾಗಿ 3 ತಿಂಗಳಿಗೆ 200 ರೂಪಾಯಿ ಪಾವತಿಸಬೇಕು, ವಾರ್ಷಿಕ ಸದಸ್ಯತ್ವಕ್ಕಾಗಿ 750 ರೂಪಾಯಿ ಪಾವತಿಸಬೇಕು.