ಸಾಮಾಜಿಕ ಜಾಲತಾಣದ ಕಂಟೆಂಟ್ ಕ್ರಿಯೇಟರ್ ಗೆ ಖುಷಿ ಸುದ್ದಿಯೊಂದಿದೆ. ಯೂಟ್ಯೂಬ್ ನಿಮಗೆ ಹೆಚ್ಚು ಹಣ ಗಳಿಸುವ ಅವಕಾಶವನ್ನು ನೀಡುತ್ತಿದೆ. ಇನ್ಸ್ಟಾಗ್ರಾಮ್ ರೀಲ್ಸ್ ಹಾಗೂ ಟಿಕ್ ಟಾಕ್ ಗೆ ಟಕ್ಕರ್ ನೀಡಲು ಯುಟ್ಯೂಬ್, ಶಾರ್ಟ್ಸ್ ಶುರು ಮಾಡಿದೆ. ಈಗ ಕಂಪನಿ ವರ್ಜಿನಲ್ ಕಂಟೆಂಟ್ ಗೆ ಹೆಚ್ಚಿನ ಹಣ ನೀಡಲು ಮುಂದಾಗಿದೆ.
ಯುಟ್ಯೂಬ್ ಶಾರ್ಟ್ಸ್, ಫಂಡ್ಸ್ ಬಿಡುಗಡೆ ಮಾಡಿದೆ. ಇದ್ರಲ್ಲಿ 100 ಮಿಲಿಯನ್ ಡಾಲರ್, ಕಂಟೆಂಟರ್ ಗೆ ಸಿಗಲಿದೆ. ಯುಟ್ಯೂಬ್ ಪ್ರತಿ ತಿಂಗಳು ಅರ್ಹ ಕಂಟೆಂಟ್ ಕ್ರಿಯೇಟರ್ ಸಂಪರ್ಕಿಸಿ ಅವರಿಗೆ ಹಣ ನೀಡಲಿದೆ. ಈ ಯುಟ್ಯೂಬ್ ಶಾರ್ಟ್ಸ್ ನಲ್ಲಿ ಕ್ರಿಯೇಟರ್ ಪ್ರತಿ ತಿಂಗಳು 7,400 ರೂಪಾಯಿಯಿಂದ 7,40,000 ರೂಪಾಯಿವರೆಗೆ ಸಂಪಾದಿಸಬಹುದು. ವೀಕ್ಷಕರ ಸಂಖ್ಯೆ ಹಾಗೂ ವೀಕ್ಷಣೆಯ ಸಮಯದ ಆಧಾರದ ಮೇಲೆ ಹಣ ಸಿಗಲಿದೆ.
ತಿಂಗಳ ಪ್ರದರ್ಶನವನ್ನು ಗಳಿಕೆ ಅವಲಂಬಿಸಿರುತ್ತದೆ. ಪ್ರತಿ ತಿಂಗಳು ಎಷ್ಟು ಮಂದಿ ವೀಕ್ಷಣೆ ಮಾಡಿದ್ದಾರೆ ಎಂಬುದು ಮಾನ್ಯವಾಗುತ್ತದೆ. ತಿಂಗಳಿಗೆ ನೀವು ಎಷ್ಟು ಶಾರ್ಟ್ಸ್ ಮಾಡಿದ್ದೀರಿ ಎಂಬುದು ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಶಾರ್ಟ್ಸ್ ಯಾವ ರೀತಿ ಇರಬೇಕೆಂದು ಹೇಳಲಾಗಿಲ್ಲ. ಆದ್ರೆ ವರ್ಜಿನಲ್ ಕಂಟೆಂಟ್ ಆಗಿರಬೇಕು. ಹಾಗೆ 180 ದಿನಗಳಲ್ಲಿ ಒಂದು ಶಾರ್ಟ್ಸ್ ಅಪ್ಲೋಡ್ ಮಾಡಬೇಕು.