ನವದೆಹಲಿ: ಕೇಂದ್ರ ಸರ್ಕಾರ 4 ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಸಿದ್ಧತೆ ಕೈಗೊಂಡಿದೆ. ಇದರಿಂದಾಗಿ ಟೇಕ್ ಹೋಂ ವೇತನ ಇಳಿಕೆಯಾಗಲಿದೆ.
ಕಾರ್ಮಿಕ ಸಂಹಿತೆಗಳು ಶೀಘ್ರವೇ ಅನುಷ್ಠಾನಕ್ಕೆ ಬರಲಿದ್ದು, ನಂತರದಲ್ಲಿ ನೌಕರರ ಕೈಗೆ ಸಿಗುವ ವೇತನ ಕಡಿಮೆಯಾಗಲಿದೆ. ಪಿಎಫ್ ಹೆಚ್ಚಾಗಲಿದ್ದು, ಉದ್ಯೋಗದಾತರ ಭವಿಷ್ಯನಿಧಿ ಹೊಣೆಗಾರಿಕೆ ಹೆಚ್ಚಾಗಲಿದೆ. ಸಂಹಿತೆ ಅನುಷ್ಠಾನದ ನಂತರ, ನೌಕರರ ಮೂಲ ವೇತನ ಮತ್ತು ಭವಿಷ್ಯ ನಿಧಿ(ಪಿಎಫ್) ಲೆಕ್ಕಹಾಕುವ ವಿಧಾನದಲ್ಲಿ ಗಮನಾರ್ಹ ಬದಲಾವಣೆ ಕಂಡುಬರುತ್ತದೆ.
ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಕಾರ್ಮಿಕ ಸಂಹಿತೆಗಳ ಪ್ರಕಾರ, ವೇತನ, ಸಾಮಾಜಿಕ ಭದ್ರತೆ, ವೃತ್ತಿ ಸಂಬಂಧಿತ ಆರೋಗ್ಯ ಸುರಕ್ಷತೆ ಕೆಲಸದ ಪರಿಸ್ಥಿತಿ, ಕೈಗಾರಿಕೆ ಸಂಬಂಧಗಳಿಗೆ ಸಂಬಂಧಿಸಿಪಟ್ಟಿರುತ್ತದೆ. ಇದುವರೆಗೆ ಇದ್ದ 44 ಕೇಂದ್ರ ಕಾನೂನುಗಳನ್ನು ಜಾರಿಯಾಗಲಿರುವ 4 ಕಾರ್ಮಿಕ ಸಂಹಿತೆಗಳಲ್ಲಿ ಸೇರ್ಪಡೆ ಮಾಡಲಾಗಿದ್ದು, ಇವುಗಳು ಅನುಷ್ಠಾನಗೊಂಡಲ್ಲಿ ಟೇಕ್ ಹೋಂ ವೇತನ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.