ಹೊಸ ವೇತನ ನಿಯಮದಡಿಯಲ್ಲಿ ಕಂಪನಿಗಳು ತಮ್ಮ ನೌಕರರಿಗೆ ನೀಡುವ ಸಂಬಳದ ಪ್ಯಾಕೇಜ್ನ್ನ ಪುನರ್ರಚಿಸುವ ಅಗತ್ಯವಿದೆ. ಮುಂದಿನ ವರ್ಷ ಏಪ್ರಿಲ್ನಿಂದ ಆರಂಭವಾಗುವ ಹೊಸ ಹಣಕಾಸು ವರ್ಷದಿಂದ ಭತ್ಯೆ ಘಟಕವು ಒಟ್ಟು ಸಂಬಳಕ್ಕೆ ಹೋಲಿಸಿದ್ರೆ ಅದರ 50 ಪ್ರತಿಶತ ಮೀರುವಂತಿಲ್ಲ.
ಈ ನಿಯಮದ ಪ್ರಕಾರ ಕಂಪನಿಗಳು ತನ್ನ ಸಿಬ್ಬಂದಿಯ ಮೂಲ ವೇತನದ ಘಟಕವನ್ನ ಹೆಚ್ಚಿಸಬೇಕಾಗುತ್ತದೆ. ಇದರಿಂದ ಗ್ರ್ಯಾಚುಟಿ ಪಾವತಿ ಪ್ರಮಾಣಕ್ಕನುಗುಣವಾಗಿ ಏರಿಕೆಯಾಗುತ್ತದೆ ಹಾಗೂ ಪಿಎಫ್ಗೆ ನೌಕರರ ಕೊಡುಗೆ ಹೆಚ್ಚಾಗಲಿದೆ . ಇದರಿಂದಾಗಿ ಸಿಬ್ಬಂದಿಯ ಟೇಕ್ ಹೋಂ ಸಂಬಳ ಕಡಿಮೆಯಾಗಲಿದೆ .ಆದರೆ ನಿವೃತ್ತಿ ಬಳಿಕ ಸಿಗುವ ಮೊತ್ತ ಹೆಚ್ಚಾಗಲಿದೆ.