ಅಕ್ಟೋಬರ್ 1 ರಿಂದ ನಿಮ್ಮ ಆರೋಗ್ಯ ವಿಮಾ ಪಾಲಿಸಿಯ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಐಆರ್ಡಿಎಐನ ವಿಮಾ ನಿಯಂತ್ರಣ ಪ್ರಾಧಿಕಾರ ಜನರಿಗೆ ಅನುಕೂಲವಾಗುವಂತಹ ನಿಯಮಗಳನ್ನು ಬದಲಾಯಿಸಿದೆ.ಕಂಪನಿಗಳು ಮನಸ್ಸಿಗೆ ಬಂದಂತೆ ಗ್ರಾಹಕರ ಕ್ಲೇಮ್ ನಿರ್ಧಾರವನ್ನು ತಿರಸ್ಕರಿಸಲು ಸಾಧ್ಯವಾಗುವುದಿಲ್ಲ.
ಪಾಲಿಸಿಯನ್ನು 8 ವರ್ಷಗಳವರೆಗೆ ನಿರಂತರವಾಗಿ ಪಾವತಿಸುತ್ತ ಬಂದಲ್ಲಿ ಕ್ಲೇಮ್ ನಿರಾಕರಿಸಲು ಸಾಧ್ಯವಿಲ್ಲ. ದೊಡ್ಡ ರೋಗದಿಂದ ಬಳಲುವವರು ವಿಮೆ ಕ್ಲೇಮ್ ಗೆ ಮುಂದಾದ್ರೆ ಅವ್ರಿಗೆ ಅವಕಾಶ ನೀಡಬೇಕಾಗುತ್ತದೆ. ವಿಮಾ ಪ್ರೀಮಿಯಂ ದರಗಳು ಹೆಚ್ಚಾಗಲಿವೆ. ಹೊಸ ಉತ್ಪನ್ನಗಳಲ್ಲಿ ಪ್ರೀಮಿಯಂ ಶೇಕಡಾ 5 ರಿಂದ 20ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮಾನಸಿಕ, ಆನುವಂಶಿಕ ಕಾಯಿಲೆ, ನರ ಸಂಬಂಧಿತ ಕಾಯಿಲೆಗಳಂತಹ ಗಂಭೀರ ಕಾಯಿಲೆಗಳಿಗೂ ಕ್ಲೇಮ್ ಸಿಗಲಿದೆ. ನ್ಯೂರೋ ಡಿಸಾರ್ಡರ್, ಮೌಖಿಕ ಕೀಮೋಥೆರಪಿ, ರೊಬೊಟಿಕ್ ಸರ್ಜರಿ, ಸ್ಟೆಮ್ ಸೆಲ್ ಥೆರಪಿಗೂ ಅವಕಾಶ ಸಿಗಲಿದೆ.
ಒಂದಕ್ಕಿಂತ ಹೆಚ್ಚು ಕಂಪನಿಗಳ ವಿಮೆ ಹೊಂದಿರುವ ಗ್ರಾಹಕನಿಗೆ ಕ್ಲೇಮ್ ಆಯ್ಕೆಗೆ ಅವಕಾಶವಿರುತ್ತದೆ. 30 ದಿನದೊಳಗೆ ಕ್ಲೈಮ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಟೆಲಿಮೆಡಿಸಿನ್ ವೆಚ್ಚಗಳು ಇದ್ರಲ್ಲಿ ಒಳಗೊಂಡಿವೆ. ಇದಲ್ಲದೆ ವಿಮೆಗೆ ಸಂಬಂಧಿಸಿದ ಇನ್ನೂ ಅನೇಕ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಇದು ವಿಮೆದಾರರ ಮೇಲೆ ಪರಿಣಾಮ ಬೀರಲಿದೆ.