ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಸಾಕಷ್ಟು ಆಫರ್ ನೀಡ್ತಿವೆ. ರಿಲಾಯನ್ಸ್ ಜಿಯೋ, ಬಿಎಸ್ಎನ್ ಎಲ್ ಸೇರಿದಂತೆ ಏರ್ಟೆಲ್ ಕೂಡ ಹೊಸ ಹೊಸ ಆಫರ್ ನೀಡ್ತಿದೆ. ಈಗ ಏರ್ಟೆಲ್ ಮತ್ತೊಂದು ಆಫರ್ ಹೊತ್ತು ತಂದಿದೆ.
ಏರ್ಟೆಲ್ ಬಳಕೆದಾರರಿಗೆ ಈ ಪ್ರಿಪೇಯ್ಡ್ ರೀಚಾರ್ಜ್ನಲ್ಲಿ ಶೇಕಡಾ 50ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ. ಕ್ಯಾಶ್ಬ್ಯಾಕ್ ಕೊಡುಗೆಯ ಲಾಭ ಅಮೆಜಾನ್-ಪೇ ಸಹಾಯದಿಂದ ರೀಚಾರ್ಜ್ ಮಾಡಿದ್ರೆ ಮಾತ್ರ ಲಭ್ಯವಾಗಲಿದೆ. ಏರ್ಟೆಲ್ನ ಈ ಕ್ಯಾಶ್ಬ್ಯಾಕ್ ಕೊಡುಗೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಸಿಗಲಿದೆ.
ಏರ್ಟೆಲ್ ಬಳಕೆದಾರರು ಈ ಯೋಜನೆಯನ್ನು ಅಮೆಜಾನ್ ಇಂಡಿಯಾ ಅಪ್ಲಿಕೇಶನ್ ಸಹಾಯದಿಂದ ಅಮೆಜಾನ್-ಪೇ ಮೂಲಕ ರೀಚಾರ್ಜ್ ಮಾಡಬೇಕಾಗುತ್ತದೆ. ಏರ್ಟೆಲ್ ಬಳಕೆದಾರರು ಪ್ರಿಪೇಯ್ಡ್ ರೀಚಾರ್ಜ್ನಲ್ಲಿ ಗರಿಷ್ಠ ಶೇಕಡಾ 50 ರಷ್ಟು ಕ್ಯಾಶ್ಬ್ಯಾಕ್ ಅಥವಾ 40 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ.
ಏರ್ಟೆಲ್ನ ಈ ಆಫರ್ ಸೀಮಿತ ಸಮಯಕ್ಕೆ ಮಾತ್ರ ಅನ್ವಯಿಸುತ್ತದೆ. ಏರ್ಟೆಲ್ ಬಳಕೆದಾರರು ಇದ್ರ ಲಾಭವನ್ನು ಅಕ್ಟೋಬರ್ 30 ರವರೆಗೆ ಮಾತ್ರ ಪಡೆಯಬಹುದು.