ಜೀವ ವಿಮಾ ಪಾಲಿಸಿ, ಆರೋಗ್ಯ ಪಾಲಿಸಿ ಅಥವಾ ಮೋಟಾರು ಪಾಲಿಸಿಯ ಸುರಕ್ಷತೆಯ ಬಗ್ಗೆ ಇನ್ಮುಂದೆ ಚಿಂತಿಸಬೇಕಾಗಿಲ್ಲ. ಇದ್ರ ಪೇಪರ್ ಗಳನ್ನು ಸುರಕ್ಷಿತವಾಗಿ, ಫೈಲ್ ನಲ್ಲಿ ಇಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಇವುಗಳನ್ನು ಸರ್ಕಾರದ ಸುರಕ್ಷಿತ ಅಪ್ಲಿಕೇಶನ್‌ಗಳಲ್ಲಿ ಒಂದಾದ ಡಿಜಿಲಾಕರ್‌ನಲ್ಲಿ ಇರಿಸಬಹುದು.
ಪಾಲಿಸಿಯ ಪೇಪರ್ ಗಳು ಮುಖ್ಯ ದಾಖಲೆಗಳಾಗಿರುತ್ತವೆ. ಅಗತ್ಯವಿದ್ದಾಗ ದಾಖಲೆಗಳು ಸಿಗದೆ ಹೋದಲ್ಲಿ ಅಥವಾ ಹರಿದು ಹೋಗಿದ್ದರೆ ಪಾಲಿಸಿ ಹಣ ನಿಮಗೆ ಸಿಗುವುದು ಕಷ್ಟವಾಗುತ್ತದೆ. ಆದರೆ ಇನ್ಮುಂದೆ ದಾಖಲೆಗಳನ್ನು ಸುರಕ್ಷಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಡಿಜಿಲಾಕರ್ ನಲ್ಲಿ ದಾಖಲೆಗಳು ಶಾಶ್ವತವಾಗಿ ಸುರಕ್ಷಿತವಾಗಿರುತ್ತವೆ.
ಭತ್ತ, ರಾಗಿ, ಜೋಳ ಬೆಳೆಗಾರರಿಗೆ ಗುಡ್ ನ್ಯೂಸ್: ಖರೀದಿ ಮಿತಿ ಹೆಚ್ಚಳ
ವಿಮಾ ನಿಯಂತ್ರಕ ಐಆರ್ಡಿಎಐ ವಿಮಾ ಕಂಪನಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದೆ. ವಿಮಾ ಕಂಪನಿಗಳು, ಗ್ರಾಹಕರಿಗೆ ಡಿಜಿಲಾಕರ್ ಸೌಲಭ್ಯದ ಬಗ್ಗೆ ತಿಳಿಸುವಂತೆ ಐಆರ್ಡಿಎಐ ಹೇಳಿದೆ. ಹಾಗೆ ಡಿಜಿ ಲಾಕರ್ ಬಳಕೆ ಬಗ್ಗೆಯೂ ಕಂಪನಿ ವಿಮಾ ಕಂಪನಿಗಳಿಗೆ ತಿಳಿಸಿದೆ.
ಐಟಿ ವ್ಯವಸ್ಥೆಗಳನ್ನು ಡಿಜಿಲಾಕರ್ ಸೌಲಭ್ಯಗಳೊಂದಿಗೆ ಸಂಯೋಜಿಸುವಂತೆ ಐಆರ್ಡಿಎಐ ವಿಮಾ ಕಂಪನಿಗಳಿಗೆ ಹೇಳಿದೆ. ವಿಮಾದಾರರು ತಮ್ಮ ಎಲ್ಲಾ ಪಾಲಿಸಿ ದಾಖಲೆಗಳನ್ನು ನಿರ್ವಹಿಸಲು ಡಿಜಿಲಾಕರ್ ಬಳಸಬಹುದು. ಡಿಜಿ ಲಾಕರ್ ಎಂದ್ರೆ ಡಿಜಿಟಲ್ ಲಾಕರ್. ಇದ್ರಲ್ಲಿ ನಿಮ್ಮ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬಹುದು. ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಆರ್ಸಿ, ಆಧಾರ್ ಮುಂತಾದ ಗುರುತಿನ ದಾಖಲೆಗಳನ್ನು ಇದ್ರಲ್ಲಿ ಇಡಬಹುದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದು ಲಭ್ಯವಿದೆ.