ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ದರೆ ಕೇಂದ್ರ ಸರ್ಕಾರ ನಿಮಗೊಂದು ಸುವರ್ಣಾವಕಾಶ ನೀಡ್ತಿದೆ. ಕೇಂದ್ರ ಸರ್ಕಾರದ ನೆರವಿನಿಂದ ಎಲ್ಪಿಜಿ ಸಿಲಿಂಡರ್ ವಿತರಣಾ ಕೇಂದ್ರ ಶುರು ಮಾಡಿ ಸಣ್ಣ ಪ್ರಮಾಣದಲ್ಲಿ ಹಣ ಗಳಿಸಬಹುದು. ಸೇವಾ ಕೇಂದ್ರವು ದೇಶದಲ್ಲಿ ಒಂದು ಲಕ್ಷ ಎಲ್‌ಪಿಜಿ ವಿತರಣಾ ಕೇಂದ್ರಗಳನ್ನು ಪ್ರಾರಂಭಿಸಲು ಯೋಜಿಸಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಸಿಎಸ್ಸಿ ಈ ಯೋಜನೆಯ ಕೆಲಸವನ್ನು ಪ್ರಾರಂಭಿಸಲಿದೆ. ಎಲ್‌ಪಿಜಿ ವಿತರಣಾ ಕೇಂದ್ರಗಳು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆಯಲಿವೆ.
ಬ್ಯುಸಿನೆಸ್ ಶುರು ಮಾಡಲು ಬಯಸಿದ್ದರೆ ಸಾಮಾನ್ಯ ಸೇವಾ ಕೇಂದ್ರ ಯೋಜನೆ ನೆರವಾಗಲಿದೆ. ಸಿಎಸ್ಸಿ https://csc.gov.in/cscspvinfo ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಸಿಎಸ್‌ಸಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು. ಸಿಎಸ್ಸಿಯ ಅನುಮೋದನೆ ಪಡೆದ ನಂತರ, ಬ್ಯಾಂಕಿಂಗ್, ವಿಮೆ, ಪ್ಯಾನ್ ಕಾರ್ಡ್ ಮತ್ತು ಪಾಸ್ಪೋರ್ಟ್ ತಯಾರಿಕೆ ಸೇವೆಗಳನ್ನು ಒದಗಿಸಬಹುದು. ವಿದ್ಯುತ್ ಬಿಲ್ ಪಾವತಿ, ಐಆರ್‌ಸಿಟಿಸಿಯಿಂದ ಟಿಕೆಟ್ ಬುಕಿಂಗ್, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಂಬಂಧಿತ ಕೋರ್ಸ್‌ಗಳನ್ನು ಸಹ ಒದಗಿಸಬಹುದು. ಸರ್ಕಾರ ಸಿಎಸ್‌ಸಿ ಮೂಲಕ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸುತ್ತಿದೆ.
ಸಿಎಸ್ಸಿ ಪ್ರಸ್ತುತ ದೇಶಾದ್ಯಂತ 21000 ಎಲ್ಪಿಜಿ ಕೇಂದ್ರಗಳನ್ನು ನಿರ್ವಹಿಸುತ್ತಿದೆ. ಇದಕ್ಕಾಗಿ ಇದು ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ,ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಬಡ ಕುಟುಂಬಗಳಿಗೆ ಶುದ್ಧ ಸಿಲಿಂಡರ್ ಒದಗಿಸುವ ಗುರಿ ಹೊಂದಲಾಗಿದೆ. ಎಲ್ಪಿಜಿ ಸಿಲಿಂಡರ್ ಕೇಂದ್ರವನ್ನು ಎಲ್ಲ ರಾಜ್ಯಗಳಲ್ಲಿ ತೆರೆಯಲಿದೆ.